ಬ್ರಹ್ಮಾವರ ಮಿನಿ ವಿಧಾನಸೌಧ ನಿರ್ಮಾಣ ಮಾಡಲು ಉಡುಪಿ ಶಾಸಕರಿಗೆ ಯೋಗ್ಯತೆ ಇಲ್ಲವೇ?: ಮದ್ವರಾಜ್

ಕುಂದಾಪುರ: ಹೆಬ್ರಿ ತಾಲ್ಲೂಕು ಘೋಷಣೆ ಆಗುವ ಮೊದಲೇ ಬ್ರಹ್ಮಾವರ ತಾಲ್ಲೂಕು ಘೋಷಣೆಯಾಗಿದ್ದರೂ ಕೂಡ ಮಿನಿ ವಿಧಾನಸೌಧದ ಕನಸು ನನಸಾಗದೇ ಇರುವುದು ಪ್ರಸ್ತುತ ಶಾಸಕ ಕೆ. ರಘುಪತಿ ಭಟ್ ಅವರ ವೈಫಲ್ಯಕ್ಕೆ ಸಾಕ್ಷಿ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದರು. ಅವರು ಮಂಗಳವಾರ ಬ್ರಹ್ಮಾವರದ ಪ್ರೆಸ್ ಕ್ಲಬ್ಬಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಹಿಂದಿನ ಮುಖ್ಯಮಂತ್ರಿ  ಸಿದ್ಧರಾಮಯ್ಯ ಅವರ ಅವಧಿಯಲ್ಲಿ ಅಂದಿನ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಬ್ರಹ್ಮಾವರ ತಾಲ್ಲೂಕು ಉದ್ಘಾಟನೆಯಾಗಿತ್ತು. ಮಿನಿ ವಿಧಾನ ಸೌಧಕ್ಕಾಗಿ ಹಳೆ […]