ನನ್ನ ರಾಜಕೀಯ ನಡೆಯ ಬಗ್ಗೆ ರಘುಪತಿ ಭಟ್‌ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ: ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ತಿರುಗೇಟು

ಉಡುಪಿ: ನನ್ನ ರಾಜಕೀಯ ನಡೆ ಮತ್ತು ನಿರ್ಧಾರ ಬಗ್ಗೆ ಶಾಸಕ ರಘುಪತಿ ಭಟ್‌ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ಅವರು ಕ್ಷೇತ್ರದ ಜನತೆಯ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದ್ದಾರೆ. ಶಾಸಕ ರಘುಪತಿ ಭಟ್‌ ಇಂದು ಪತ್ರಿಕಾಗೋಷ್ಠಿಯಲ್ಲಿ ನೀಡಿದ ‘ಪ್ರಮೋದ್‌ ಮಧ್ವರಾಜ್‌ಗೆ ಬಿಜೆಪಿ ಗೇಟ್‌ ಓಪನ್‌ ಇದೆ’ ಎಂಬ ಹೇಳಿಕೆಗೆ ಆಡಿಯೋ ಹೇಳಿಕೆಯಲ್ಲಿ ತಿರುಗೇಟು ನೀಡಿದ್ದಾರೆ. ರಘುಪತಿ ಭಟ್‌ ಅನೇಕ ಸುಳ್ಳುಗಳನ್ನು ಹೇಳಿ, ಮೋದಿ ಮತ್ತು ಹಿಂದುತ್ವದ ಹೆಸರಿನಲ್ಲಿ ಕಳೆದ ವಿಧಾನಸಭೆ […]