ಸಂಸದೆ ಶೋಭಾ ಕರಂದ್ಲಾಜೆ ಸಾಧನೆ ಶೂನ್ಯ: ಪ್ರಮೋದ್ ಮಧ್ವರಾಜ್

ಉಡುಪಿ: ಉಪ್ಪೂರು ಪ್ರೌಢಶಾಲೆ ಬಳಿ ಸ್ಥಾಪಿಸಿರುವ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ದಲ್ಲಿ ಸಂಸದೆ ಶೋಭಾ ಕರಂದ್ಲಾಜೆಯವರ ಸಾಧನೆ ಶೂನ್ಯ. ಅವರು ಏನು ಕೆಲಸ ಮಾಡದೆ. ಯಾರೋ ಮಾಡಿದ ಕೆಲಸವನ್ನು ತಾನು ಮಾಡಿದ್ದೇನೆಂದು ಹೇಳುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ದೂರಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಟಿಟಿಸಿ ಕಾಲೇಜು ಶೋಭಾ ಅವರ ಪ್ರಯತ್ನದಿಂದ ನಿರ್ಮಿಸಲಾಗಿದೆ ಎಂಬ ಶಾಸಕ ರಘುಪತಿ ಭಟ್ರ ಟ್ವೀಟ್ ಸತ್ಯಕ್ಕೆ ದೂರವಾಗಿದ್ದು, ಇದಕ್ಕಿಂತ ದೊಡ್ಡ ಸುಳ್ಳು ಇನ್ನೊಂದಿಲ್ಲ ಎಂಬುವುದನ್ನು ಜಿಟಿಟಿಸಿ […]