ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌) ಮುಂದೂಡಿಕೆ

ನವದೆಹಲಿ: ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೆಟ್‌)ಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮುಂದೂಡಿದೆ. ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್‌) ಪರೀಕ್ಷೆಯ ದಿನಾಂಕಗಳಂದೇ ನೆಟ್ ಪರೀಕ್ಷೆ ನಿಗದಿಯಾಗಿದ್ದರಿಂದ ಈ ಕ್ರಮ ಕೈಗೊಂಡಿದೆ. ಈ ಹಿಂದೆ ಸೆ.16ರಿಂದ 25ರವರೆಗೆ ನೆಟ್‌ ನಿಗದಿಯಾಗಿತ್ತು. ಆದರೆ ಇದೀಗ ಈ ಪರೀಕ್ಷೆಯನ್ನು ಸೆ.24ರಿಂದ ಆರಂಭಿಸಲು ಎನ್‌ಟಿಎ ನಿರ್ಧರಿಸಿದೆ. ಶೀಘ್ರದಲ್ಲೇ ವಿಷಯವಾರು ದಿನಾಂಕ, ಅವಧಿಯನ್ನು ಎನ್‌ಟಿಎ ವೆಬ್‌ಸೈಟ್‌ನಲ್ಲಿ ಪ್ರಕಟವಾಗಲಿದೆ ಎಂದು ತಿಳಿಸಿದೆ.