ಮಣಿಪಾಲದಲ್ಲಿ ಬೀದಿನಾಯಿಗಳ ಮಾರಣಹೋಮ: ವಿಷವುಣಿಸಿ‌ 10 ನಾಯಿಗಳ‌ ಹತ್ಯೆ

ಉಡುಪಿ, ಜೂ.25: ಮಣಿಪಾಲ ಮಾಂಡವಿ ಎಮರಾಲ್ಡ್ ಮುಂಭಾಗ 10 ಬೀದಿ ನಾಯಿಗಳನ್ನು ಮೀನಿನ ಮೂಲಕ ವಿಷ ಹಾಕಿ ಹತ್ಯೆಗೈಯ್ಯಲಾಗಿದೆ. ಜೂ. 22ರಂದು ರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿ ವಿಷಪೂರಿತ ಮೀನುಗಳನ್ನು ಬೀದಿ ನಾಯಿಗಳಿಗೆ ಹಾಕಿ ತಿನ್ನುವಂತೆ ಮಾಡಿದ್ದು, ಇದರಿಂದ 8 ನಾಯಿಗಳು ಮತ್ತು ಜೂ.24ರಂದು ಎರಡು ನಾಯಿಗಳು ಮೃತಪಟ್ಟಿವೆ ಎಂದು ಮಲ್ಪೆ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ನ ಬಬಿತಾ ರಾಜ್ ಮಣಿಪಾಲ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಎಲ್ಲ ನಾಯಿಗಳ ಕಳೇಬರಹವನ್ನು ಉಡುಪಿ ನಗರಸಭೆ ಸಿಬಂದಿ ತೆಗೆದು […]