ಮಕ್ಕಳ ಭವಿಷ್ಯ ಕಾಪಾಡಲು ಪೋಲಿಯೋ ಹಾಕಿಸಿ: ಡಾ. ಜಯಮಾಲಾ

ಉಡುಪಿ: ಮಕ್ಕಳ ಭವಿಷ್ಯ ಆರೋಗ್ಯಕರವಾಗಿರುವ ದೃಷ್ಠಿಯಿಂದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಹೇಳಿದ್ದಾರೆ. ಅವರು ಭಾನುವಾರ, ಉಡುಪಿಯ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪೊಲಿಯೋ ಲಸಿಕೆ ಹಾಕಿ ಮಾತನಾಡಿದರು. ಪೋಲಿಯೋ ಲಸಿಕೆ ಮಕ್ಕಳ ಬದುಕಿಗೆ ಅಮೃತಬಿಂದು ಇದ್ದ ಹಾಗೆ, ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೋ ಹಾಕಿಸಿ ಅವರ ಭವಿಷ್ಯವನ್ನು […]
ಜಿಲ್ಲೆಯಲ್ಲಿ 77722 ಮಕ್ಕಳಿಗೆ ಪೋಲಿಯೋ ಹನಿ – ಜಿಲ್ಲಾಧಿಕಾರಿ

ಉಡುಪಿ:ಜಿಲ್ಲೆಯಲ್ಲಿ ಫೆಬ್ರವರಿ 3 ರಂದು ನಡೆಯುವ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 77722 ಮಕ್ಕಳಿಗೆ ಪೋಲಿಯೋ ನೀಡುವ ಗುರಿ ಇದ್ದು, 677 ಬೂತ್‍ಗಳನ್ನು ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ತಿಳಿಸಿದ್ದಾರೆ. ಅವರು ಸೋಮವಾರ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪಲ್ಸ್ ಪೋಲಿಯೋ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಈ ಬಾರಿ ಫೆಬ್ರವರಿ 3 ರಂದು ಒಂದೇ ಹಂತದಲ್ಲಿ ಪಲ್ಸ್ ಪೋಲಿಯೋ ಲಸಿಕೆ ನೀಡುವ ಕಾರ್ಯಕ್ರಮ ನಡೆಯಲಿದ್ದು, ಯಾವುದೇ […]