ಕುಂದಾಪುರ: ತುರ್ತು ಸಂದರ್ಭ ಹೊರತುಪಡಿಸಿ ವಾಹನ ರಸ್ತೆಗಿಳಿಸಿದರೆ ಕೇಸು ಜಡಿತೇವೆ:ಪೊಲೀಸರಿಂದ ಖಡಕ್ ಎಚ್ಚರಿಕೆ

ಕುಂದಾಪುರ: ತುರ್ತು ಸಂದರ್ಭ ಹೊರತುಪಡಿಸಿ ಖಾಸಗಿ ವಾಹನಗಳನ್ನು ರಸ್ತೆಗಿಳಿಸಬೇಡಿ ಎಂಬ ಜಿಲ್ಲಾಡಳಿತದ ಖಡಕ್ ಸೂಚನೆಯನ್ನೂ ಲೆಕ್ಕಿಸದೆ ಮಂಗಳವಾರ ರಸ್ತೆಗಿಳಿದ ಖಾಸಗಿ ವಾಹನ ಮಾಲೀಕರಿಗೆ ಟ್ರಾಫಿಕ್ ಪೊಲೀಸರು ಖಡಕ್ ಎಚ್ಚರಿಕೆ ನೀಡಿ ಮನೆಗೆ ವಾಪಾಸ್ ಕಳುಹಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಕುಂದಾಪುರದ ಶಾಸ್ತ್ರೀವೃತ್ತದಲ್ಲಿ ನಡೆದಿದೆ. ಸಿಎಂ ಹೊರಡಿಸಿರುವ ಲಾಕ್‌ಡೌನ್ ಆದೇಶಕ್ಕೆ ತಾಲೂಕಿನ ಎಲ್ಲಾ ವರ್ತಕರು, ರಿಕ್ಷಾ ಚಾಲಕರು, ಹೊಟೇಲ್ ಮಾಲೀಕರು ಬೆಂಬಲ ಸೂಚಿಸಿ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದುಕೊಂಡರೆ, ಬಹುತೇಕ ಖಾಸಗಿ ವಾಹನಗಳ ಹಾಗೂ ದ್ವಿಚಕ್ರ […]