ಪೊದಾರ್ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

ಉಡುಪಿ: ಪೊದಾರ್ ಇಂಟರ್‌ನ್ಯಾಷನಲ್ ಶಾಲೆ ,ಉಡುಪಿ ಇಲ್ಲಿ ನ.30 ರಂದು ವಾರ್ಷಿಕ ಕ್ರೀಡಾಕೂಟವನ್ನು ನಡೆಸಲಾಯಿತು. ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಗಿರೀಶ್ ಕುಮಾರ್ ಪ್ರಾಂಶುಪಾಲರು ಪೊದಾರ್ ಇಂಟರ್‌ನ್ಯಾಷನಲ್ ಶಾಲೆ ಮಂಗಳೂರು ಮಾತನಾಡಿ,ನಮಗೆ ವಿದ್ಯೆಯಂತೆ ಕ್ರೀಡೆಗಳು ಕೂಡ ವ್ಯಕ್ತಿತ್ವ ವಿಕಸನದಲ್ಲಿ ಪ್ರಮುಖ ಪಾತ್ರವಹಿಸುತ್ತದೆ.ಮಕ್ಕಳು ಉತ್ತಮ ಆರೋಗ್ಯಕ್ಕಾಗಿ ವ್ಯಾಯಮ, ವಿವಿಧ ಕ್ರೀಡೆಗಳನ್ನು ಆಡುವ ಹವ್ಯಾಸ ಬೆಳೆಸಿಕೊಳ್ಳಬೇಕು.ಪೊದಾರ್‌ನಲ್ಲಿ ದೈಹಿಕ ಶಿಕ್ಷಣವು ವೈಜ್ಞಾನಿಕ ದೃಷ್ಟಿಕೋನದಿಂದ ರೂಪಿಸಲ್ಪಟ್ಟಿದೆ ಎಂದರು. ಗಿರೀಶ್ ಮೆನನ್ ನರಶಾಸ್ತ್ರಜ್ಞರು ಕೆ.ಎಮ್.ಸಿ. ಮಣಿಪಾಲ ಕ್ರೀಡಾಕ್ಷೇತದಲ್ಲಿ ಸಾಧನೆ ಮಾಡಿದಂತಹ ಸಾಧಕರ ಉದಾಹರಣೆಗಳನ್ನು ನೀಡಿ […]