ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣವೆಂಬ ಮೂರು ಅನಿಷ್ಟಗಳ ವಿರುದ್ಧ ಹೋರಾಡಬೇಕು: ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: 77 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಲ್ಲಿ ಧ್ವಜಾರೋಹಣ ಮಾಡಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣ ನೀತಿಯನ್ನು ಸಾರಾಸಗಟಾಗಿ ತಿರಸ್ಕರಿಸಲು ಕರೆ ನೀಡಿದರು. ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಅಭಿವೃದ್ಧಿ ಹೊಂದಿದ ಭಾರತಕ್ಕಾಗಿ ಪ್ರತಿಪಾದಿಸಿದರು ಮತ್ತು “ಪರಿವಾರವಾದ” ವಿರುದ್ಧ ವಾಗ್ದಾಳಿ ನಡೆಸಿದರು. ಭ್ರಷ್ಟಾಚಾರ, ಸ್ವಜನಪಕ್ಷಪಾತ ಮತ್ತು ತುಷ್ಟೀಕರಣದ ಮೂರು ಅನಿಷ್ಟಗಳ ವಿರುದ್ಧ ನಾವು ಹೋರಾಡಬೇಕಾಗಿದೆ ಎಂದು ಅವರು ಹೇಳಿದರು. #WATCH | Prime Minister Narendra Modi hoists […]

ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ನವದೆಹಲಿ: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು. ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುವ ಮೊದಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದರು. ಸಿದ್ದರಾಮಯ್ಯ ಅವರು ಮರದಲ್ಲಿ ತಯಾರಿಸಿದ ಆನೆಯ ವಿಗ್ರಹ ಮತ್ತು ಹಾರವನ್ನು ಪ್ರಧಾನಿ ಮೋದಿ ಅವರಿಗೆ ನೀಡಿದರು. ಪಿಎಂಒ ಟ್ವೀಟ್ ಮಾಡಿರುವ ಚಿತ್ರದಲ್ಲಿ ಪ್ರಧಾನಿ ಮೋದಿ ಅವರು ಕರ್ನಾಟಕದ ಸಾಂಪ್ರದಾಯಿಕ ಪೇಟ ಮತ್ತು ಶಾಲನ್ನು ತೊಟ್ಟಿದ್ದಾರೆ. ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ […]

ಐಫೆಲ್ ಟವರ್ ನಿಂದ ಭಾರತೀಯ ಯುಪಿಐ ಬಳಸಿ ರೂಪಾಯಿಗಳಲ್ಲಿ ಹಣ ಪಾವತಿಸಿ: ಪ್ರಧಾನಿ ಮೋದಿ

ಪ್ಯಾರಿಸ್: ಭಾರತದ ಅತ್ಯಂತ ಯಶಸ್ವಿ ಪಾವತಿ ವ್ಯವಸ್ಥೆ ಯುಪಿಐ ಅನ್ನು ಫ್ರಾನ್ಸ್‌ನಲ್ಲಿಯೂ ಬಳಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಿಸ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಹೇಳಿದರು. “ಭಾರತ ಮತ್ತು ಫ್ರಾನ್ಸ್ ದೆಶಗಳು ಫ್ರಾನ್ಸ್‌ನಲ್ಲಿ ಯುಪಿಐ ಬಳಸಲು ಒಪ್ಪಿಕೊಂಡಿವೆ. ಮುಂಬರುವ ದಿನಗಳಲ್ಲಿ ಇದು ಐಫೆಲ್ ಟವರ್‌ನಿಂದ ಪ್ರಾರಂಭವಾಗುತ್ತದೆ, ಅಂದರೆ ಭಾರತೀಯ ಪ್ರವಾಸಿಗರು ಈಗ ರೂಪಾಯಿಗಳಲ್ಲಿ ಪಾವತಿಸಲು ಸಾಧ್ಯವಾಗುತ್ತದೆ” ಎಂದು ಏಕೀಕೃತ ಪಾವತಿ ವ್ಯವಸ್ಥೆ(ಯುಪಿಐ)ಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. #WATCH | India and France have agreed […]

ಅಮೇರಿಕಾದಲ್ಲಿ ಪ್ರಧಾನಿ ಮೋದಿ ಭೇಟಿ ಪರಿಣಾಮ: ಭಾರತದಲ್ಲಿ ಪ್ರಮುಖ ಹೂಡಿಕೆಗಳನ್ನು ಪ್ರಕಟಿಸಿದ Google ಮತ್ತು Amazon ಕಂಪನಿ

ನ್ಯೂಯಾರ್ಕ್: ಭಾರತದ ಡಿಜಿಟಲ್ ಜಗತ್ತಿನ ಉತ್ತೇಜಕ ಬೆಳವಣಿಗೆಯಲ್ಲಿ, Google ನ ಸಿಇಒ ಸುಂದರ್ ಪಿಚೈ ಮತ್ತು Amazon ನ ಸಿಇಒ ಆಂಡ್ರ್ಯೂ ಜಾಸ್ಸಿ ಅಮೇರಿಕಾದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಭೇಟಿಯ ನಂತರ ಮಹತ್ವದ ಹೂಡಿಕೆ ಯೋಜನೆಗಳನ್ನು ಘೋಷಿಸಿದ್ದಾರೆ. ಈ ಹೂಡಿಕೆಗಳು ಡಿಜಿಟಲ್ ರೂಪಾಂತರ ಹಾಗೂ ಸ್ಥಳೀಯ ಭಾಷೆಯ ವಿಷಯವನ್ನು ಉತ್ತೇಜಿಸುವ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮತ್ತು ಜಾಗತಿಕವಾಗಿ ಭಾರತೀಯ ಉತ್ಪನ್ನಗಳ ರಫ್ತು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಪ್ರಧಾನ ಮಂತ್ರಿಯೊಂದಿಗಿನ ಭೇಟಿಯ ಸಂದರ್ಭದಲ್ಲಿ, ಸುಂದರ್ ಪಿಚೈ ಅವರು ಗುಜರಾತ್‌ನ […]

ಮೈಸೂರಿನ ಶೀಗಂಧದ ಪೆಟ್ಟಿಗೆಯಲ್ಲಿ ದಶದಾನ; ಪ್ರಯೋಗಾಲಯದಲ್ಲಿ ಬೆಳೆದ 7.5-ಕ್ಯಾರೆಟ್ ಹಸಿರು ವಜ್ರ: ಬೈಡನ್ ದಂಪತಿಗೆ ಮೋದಿ ಉಡುಗೊರೆ

ವಾಷಿಂಗ್ಟನ್: ಬುಧವಾರ ಶ್ವೇತಭವನದಲ್ಲಿ ಬೈಡನ್ ದಂಪತಿಗಳು ನೀಡಿದ ಖಾಸಗಿ ಔತಣಕೂಟಕ್ಕೆ ತೆರಳಿದ ಪ್ರಧಾನಿ ನರೇಂದ್ರ ಮೋದಿ ಅವರು ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಥಮ ಮಹಿಳೆ ಜಿಲ್ ಬಿಡೆನ್ ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಿದರು. ಜೈಪುರದ ಕುಶಲಕರ್ಮಿಯೊಬ್ಬರು ಕರಕುಶಲತೆಯಿಂದ ತಯಾರಿಸಿದ ‘ದಶ ದಾನ’ ಹೊಂದಿದ ವಿಶೇಷ ಶ್ರೀಗಂಧದ ಪೆಟ್ಟಿಗೆಯನ್ನು ಅಧ್ಯಕ್ಷ ಬೈಡೆನ್ ಅವರಿಗೆ ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದರು. ಕರ್ನಾಟಕದ ಮೈಸೂರಿನಿಂದ ತರಿಸಲಾದ ಶ್ರೀಗಂಧದ ಮರದ ಪೆಟ್ಟಿಗೆಯು ಸಂಕೀರ್ಣವಾಗಿ ಕೆತ್ತಲಾದ ಸಸ್ಯ ಮತ್ತು ಪ್ರಾಣಿಗಳ ಮಾದರಿಗಳನ್ನು ಹೊಂದಿದೆ. […]