ಕುಂದಾಪುರ:ಇನ್ನೂ ನಿಂತಿಲ್ಲ ಮಳೆಯ ರೌದ್ರ ಆರ್ಭಟ !

ಕುಂದಾಪುರ: ತಾಲೂಕಿನಾದ್ಯಂತ ಎರಡು ದಿನಗಳಿಂದ ಸುರಿದ ಭಾರೀ ಮಳೆ ಬುಧವಾರವೂ ಮುಂದುವರಿದಿದೆ. ಸೋಮವಾರ ರಾತ್ರಿಯಿಂದ ಎಡೆಬಡದೆ ಸುರಿಯುತ್ತಿರುವ ಭಾರೀ ಗಾಳಿಮಳೆಯಿಂದಾಗಿ ಸೌಪರ್ಣಿಕಾ, ಚಕ್ರಾ ಹಾಗೂ ವಾರಾಹಿ ನದಿಗಳು ತುಂಬಿ ಹರಿದ ಪರಿಣಾಮ ತಗ್ಗು ಪ್ರದೇಶಗಳು ನೀರಿನಿಂದ ಆವೃತಗೊಂಡಿದ್ದು, ಸ್ಥಳೀಯ ನಿವಾಸಿಗಳು ತತ್ತರಿಸಿ ಹೋಗಿದ್ದಾರೆ. ಬೈಂದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಾವುಂದ, ಬಡಾಕೆರೆ, ಚಿಕ್ಕಳ್ಳಿ, ಹಡವು, ಪಡುಕೋಣೆ ಮುಂತಾದ ಊರುಗಳು ಜಲಾವೃತಗೊಂಡಿದ್ದು, ಮನೆಗಳಿಗೆ ನೀರು ನುಗ್ಗಿವೆ. ಮನೆಗಳು, ಕೃಷಿ ಗದ್ದೆ, ತೆಂಗಿನ ತೋಟಗಳಲ್ಲಿ ಆಳೆತ್ತರದ ನೀರು ನಿಂತಿದ್ದು, ದೋಣಿಗಳ […]