ಬೆಳ್ಮಣ್ ಪರಿಸರದಲ್ಲಿ ಭರ್ಜರಿ ಮತ ಪ್ರಚಾರ

ಕಾರ್ಕಳ: ಶಾಸಕನಾಗಿ, ಸಚಿವನಾಗಿ ಆ ಸ್ಥಾನವನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿದ್ದೇನೆ ಎಂಬ ವಿಶ್ವಾಸವಿದೆ. ಅನೇಕ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಸಾಕಾರವಾಗಿದೆ. ಅಂತರ್ಜಲ ವೃದ್ಧಿಗೆ ದಾಖಲೆ ಕಿಂಡಿ ಅಣೆಕಟ್ಟುಗಳು, ಕೆರೆಗಳ ಅಭಿವೃದ್ಧಿ,  ಸರಕಾರಿ, ಆಸ್ಪತ್ರೆ, ಕಟ್ಟಡಗಳ ಆಧುನೀಕರಣ, ಶಿಕ್ಷಣದ ಕ್ಷೇತ್ರದ ಉನ್ನತೀಕರಣ, ಸೇತುವೆಗಳು, ದ್ವಿಪಥ-ಚತುಷ್ಪಥ ರಸ್ತೆಗಳು, ಕಾರ್ಕಳ ಉತ್ಸವದಂತಹ ಅಭೂತಪೂರ್ವ ಕಾರ್ಯಕ್ರಮ, ದೇಶದ ಗಮನ ಸೆಳೆದ ಕರಾವಳಿಯ ಸೃಷ್ಟಿಕರ್ತ ಪರಶುರಾಮನ ಥೀಂ ಪಾರ್ಕ್ ನಿರ್ಮಾಣ, ಕಾರ್ಕಳದ ಜನತೆಗೆ ಉದ್ಯೋಗ ಕಲ್ಪಿಸಿಕೊಡಲಿರುವ ಜವಳಿ ಪಾರ್ಕ್ ಸೇರಿದಂತೆ ಅನೇಕ ಜನಹಿತ ಕಾರ್ಯಗಳು ಸಾಕಾರಗೊಂಡಿವೆ. […]