10 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ದಾರವಾಗಲಿದೆ ಇತಿಹಾಸ ಪ್ರಸಿದ್ಧ ಪೆರ್ಣಂಕಿಲ ದೇವಸ್ಥಾನ: ಹರಿದಾಸ್ ಭಟ್

ಉಡುಪಿ: ತಾಲೂಕಿನ ಪುರಾತನ ದೇವಸ್ಥಾನಗಳಲ್ಲಿ ಒಂದಾಗಿರುವ ಪೇಜಾವರ ಮಠದ ಆಡಳಿತಕ್ಕೊಳಪಟ್ಟ ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ – ಶ್ರೀ ಮಹಾಗಣಪತಿ ದೇವಸ್ಥಾನ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ಸಂಪೂರ್ಣವಾಗಿ ಜೀರ್ಣೋದ್ಧಾರಗೊಳ್ಳಲಿದ್ದು, ಫೆ. 23ರಂದು ದೇವರ ಬಿಂಬದ ಸಂಕೋಚನದಿಂದ ಜೀರ್ಣೋದ್ಧಾರ ಕಾಮಗಾರಿ ಶುರುವಾಗಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಹರಿದಾಸ ಭಟ್ ಮುಂಬೈ ಹೇಳಿದರು. ಪೆರ್ಣಂಕಿಲದ ಶ್ರೀ ಮಹಾಲಿಂಗೇಶ್ವರ- ಮಹಾಗಣಪತಿ ದೇವಸ್ಥಾನದಲ್ಲಿ ಆವರಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಈ ದೇಗುಲವು ಸುಮಾರು ಒಂದು ಸಾವಿರ ವರ್ಷಗಳ ಹಿಂದೆ […]
ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ಸಾಂಪ್ರದಾಯಿಕ ಗೂಡು ದೀಪ ಸ್ಪರ್ಧೆ

ಉಡುಪಿ: ದೀಪಾವಳಿ ಪ್ರಯುಕ್ತ ಪೆರ್ಣಂಕಿಲ ಶಂಕರ ಪ್ರತಿಷ್ಠಾನದ ವತಿಯಿಂದ ಸಾಂಪ್ರದಾಯಿಕ ಗೂಡು ದೀಪ ಸ್ಪರ್ಧೆಯನ್ನು ಅ.26 ರಂದು ಬುಧವಾರ ಸಂಜೆ 4 ಗಂಟೆಯಿಂದ ಕಾಪು ಬೀಚ್ ನಲ್ಲಿ ಆಯೋಜಿಸಲಾಗಿದ್ದು, ವಿಜೇತರಿಗೆ ನಗದು ಬಹುಮಾನ ದೊರೆಯಲಿದೆ. ಮೊದಲನೆ ಬಹುಮಾನ: 11,111ರೂ ಎರಡನೆ ಬಹುಮಾನ: 7,777ರೂ ಮೂರನೆ ಬಹುಮಾನ: 5,555ರೂ ಕಾರ್ಯಕ್ರಮದಲ್ಲಿ ಸುದುಮದ್ದು ಪ್ರದರ್ಶನವಿರಲಿದೆ ಎಂದು ಪ್ರತಿಷ್ಠಾನದ ಸಂಚಾಲಕ ಪೆರ್ಣಂಕಿಲ ಶ್ರೀಶ ನಾಯಕ್ ತಿಳಿಸಿದ್ದಾರೆ. ಸ್ಪರ್ಧೆಯ ನಿಯಮಗಳು: # ಮೂಲೆಗಳಿರುವ ಗೂಡು ದೀಪ ಕಡ್ಡಾಯ # ಬಣ್ಣದ ಕಾಗದ, ಗ್ಲಾಸ್ […]
ಪೆರ್ಣಂಕಿಲ: ವರ್ವಾಡಿ ಗದ್ದೆಯಲ್ಲಿ ಕೆಸರ್ಡೊಂಜಿ ದಿನ

ಉಡುಪಿ: ನಗರದ ಹೊರವಲಯದ ಪೆರ್ನಂಕಿಲ ವಾರ್ವಾಡಿ ಗ್ರಾಮದ ಗದ್ದೆಯಲ್ಲಿ ‘ಕೆಸರ್ಡ್ ಒಂಜಿ ದಿನ’ ಗ್ರಾಮೀಣ ಕ್ರೀಡಾಕೂಟ ಭಾನುವಾರ ಸಂಭ್ರಮದಿಂದ ನಡೆಯಿತು. ಸುತ್ತಮುತ್ತಲ ಊರುಗಳಿಂದ ಆಗಮಿಸಿದ ನೂರಾರು ಜನರು ಕೆಸರು ಗದ್ದೆಗಿಳಿದು ಸಂಭ್ರಮಿಸಿದರು. ವಾರ್ವಾಡಿ ಫ್ರೆಂಡ್ಸ್ ನೇತೃತ್ವದಲ್ಲಿ ಕೆಸರ್ಡ್ ಒಂಜಿ ದಿನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಇದೇ ಮೊದಲ ಬಾರಿಗೆ ಆಯೋಜಿಸಿದ ಗ್ರಾಮೀಣ ಕ್ರೀಡಾಕೂಟವು ಸಡಗರದಿಂದ ಜರಗಿತು. ಕೆಸರು ಗದ್ದೆಗಿಳಿದ ಯುವಕ ಯುವತಿಯರು ಕೆಸರನ್ನು ಮೈಗೆ ಎರಚಿಕೊಂಡು, ಕುಣಿದು ಕುಪ್ಪಳಿಸಿದರು. ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಲಿಂಬೆ ಚಮಚ ಓಟ, […]