ಪೆರ್ಡೂರಿನ ಈ ಮಿಠಾಯಿ ಅಂಗಡಿಯ ಸಿಹಿತಿಂಡಿ ಬಲು ರುಚಿ: ದೇಶಿ ಸ್ವಾದ ಸಖತ್ ಟೇಸ್ಟ್

ಪೆರ್ಡೂರಿನಲ್ಲಿ ಸುಮಾರು 80 ವರ್ಷಗಳಿಂದ ಸಿಹಿ ತಯಾರಿಸುತ್ತಿರುವ ಜೋಗರಾಯ ಶೇಟ್, ರವಿ ಶೇಟ್, ಶಂಕರ್ ಶೇಟ್ ಇವರ ಶ್ರೀ ಅನಂತಪದ್ಮನಾಭ ಸ್ವೀಟ್ ಸ್ಟಾಲ್ ನ ಸಿಹಿ ತಿಂಡಿಗಳು ದೇಶಿ ಸ್ವಾದದಿಂದ ಜನರ ಬಾಯನ್ನು ಸೆಳೆಯುತ್ತಿವೆ. ಈ ಮೂವ್ವರೂ ತಮ್ಮ ತಂದೆಯ ಕಾಲದಿಂದಲೂ ಸಿಹಿತಿಂಡಿಯ ಉದ್ಯೋಗವನ್ನು ಅವಲಂಬಿಸಿ ಜನಗಳಿಗೆ ಸಿಹಿಯನ್ನು ಹಂಚುತ್ತಿದ್ದಾರೆ. ಸಕ್ಕರೆ ಮಿಠಾಯಿ, ಬೆಂಡು, ಜಿಲೇಬಿ, ಅತ್ರಾಸ, ಚಕ್ಕುಲಿ ಮುಂದಾದ ಸಿಹಿ ತಿಂಡಿಯನ್ನು ತಯಾರಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ದೇಶಿ ಸ್ವಾದವಿರುವ ಇವರ ಸಿಹಿತಿಂಡಿಗಳು ಸ್ವಾದಿಷ್ಟ ಮತ್ತು […]