ಪೆರ್ಡೂರು: ಪಾಡಿಗಾರ ಬಡ ಕುಟುಂಬಕ್ಕೆ ಮನೆ ಹಸ್ತಾಂತರ; ಪೆರ್ಡೂರು ಗೆಳೆಯರ ಬಳಗದ ಸಮಾಜಮುಖಿ ಕಾರ್ಯಕ್ಕೆ ಮೆಚ್ಚುಗೆ.

ಹೆಬ್ರಿ: ಅನಾರೋಗ್ಯದ ನಡುವೆ ತೀರಾ ಬಡತನದಲ್ಲಿ ಜೀವನ ಸಾಗಿಸಿದ್ದ ಪಾಡಿಗಾರ ಐದು ಸೆಂಟ್ಸ್ ನಿವಾಸಿ ಉದಯ್ ಪೂಜಾರಿ ಕುಟುಂಬಕ್ಕೆ ಪೆರ್ಡೂರು ಗೆಳೆಯರ ಬಳಗದ ತಂಡ 5 ಲಕ್ಷ ವೆಚ್ಚದಲ್ಲಿ ಮನೆ ನಿರ್ಮಿಸಿ ಮಾ.2ರಂದು ಹಸ್ತಾಂತರ ಕಾರ್ಯಕ್ರಮ ನಡೆಯಿತು. ಉದಯ್ ಪೂಜಾರಿ ಅವರು ತನ್ನ ಸ್ವಂತ ಸೂರನ್ನು ಕಟ್ಟಬೇಕು ಎಂಬ ಕನಸು ಅನಾರೋಗ್ಯ ಕಾರಣದಿಂದ ಪೂರ್ಣಗೊಳ್ಳಲಿಲ್ಲ. ಮಕ್ಕಳನ್ನು ಓದಿಸಬೇಕು ಈ ನಡುವೆ ಮನೆ ಕಟ್ಟುವುದು ಹೇಗೆ ಎಂಬ ಅಲೋಚನೆಯಲ್ಲಿದ್ದಾಗ ಇದನ್ನು ಗಮನಿಸಿದ ಗೆಳೆಯರ ಬಳಗ ಪೆರ್ಡೂರು ತಂಡ ಸದಸ್ಯರೇ […]