ಬಾರದ ಲೋಕಕ್ಕೆ ಪಯಣಿಸಿದ ಫುಟ್ಬಾಲ್ ದಂತಕಥೆ ಪೀಲೆ: ಮೂರು ಬಾರಿ ವಿಶ್ವಕಪ್ ಗೆದ್ದ ಏಕೈಕ ಫುಟ್ಬಾಲ್ ಪಟು
ಫುಟ್ಬಾಲ್ ದಂತಕಥೆ, ಬ್ರೆಜಿಲ್‌ನ ಸಾರ್ವಕಾಲಿಕ ಪ್ರಮುಖ ಸ್ಕೋರರ್ ಪೀಲೆ 92 ಅಂತರಾಷ್ಟ್ರೀಯ ಪಂದ್ಯಗಳಲ್ಲಿ 77 ಗೋಲುಗಳೊಂದಿಗೆ ಆಟವನ್ನು ಆಡಿದ ಸರ್ವಶ್ರೇಷ್ಠ ಆಟಗಾರ ತಮ್ಮ 82 ನೇ ವಯಸ್ಸಿನಲ್ಲಿ ಬಾರದ ಲೋಕದತ್ತ ಪಯಣಿಸಿದ್ದಾರೆ. ಅಪ್ರತಿಮ, ಪ್ರತಿಭೆ, ಚುರುಕುತನ ಮತ್ತು ಸೃಜನಶೀಲತೆಯಿಂದ ತುಂಬಿದ ಸುಂದರವಾದ ಆಟದಿಂದ ಮೂರು-ಬಾರಿ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿರುವ ಪೀಲೆ ಅಕ್ಟೋಬರ್ 23, 1940 ರಂದು, ದಕ್ಷಿಣ ಬ್ರೆಜಿಲ್‌ನ ಟ್ರೆಸ್ ಕೊರಾಕೋಸ್‌ನಲ್ಲಿ ಬಡಕುಟುಂಬದಲ್ಲಿ ಜನಿಸಿದರು. ಪೀಲೆ ಮೂರು ಬಾರಿ ವಿಶ್ವಕಪ್ ಗೆದ್ದ ಏಕೈಕ ಆಟಗಾರನಾಗಿ ಉಳಿದಿದ್ದಾರೆ. […]