ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ ನಿಧನ: ಪೇಜಾವರ ಶ್ರೀ ಸಂತಾಪ

ಉಡುಪಿ: ಸಾಹಿತ್ಯ ಕ್ಷೇತ್ರ ಮತ್ತು ವಿಶ್ವಹಿಂದೂ ಪರಿಷತ್ ನಲ್ಲಿ ಅಪಾರ ಸೇವೆಯನ್ನು ಸಲ್ಲಿಸಿದ ನಮ್ಮ ಅತ್ಯಂತ ಆಪ್ತರೂ, ಆತ್ಮೀಯರೂ ಆದ ಏರ್ಯ ಲಕ್ಮೀನಾರಾಯಣ ಆಳ್ವರ ನಿಧನದ ಸುದ್ದಿಯನ್ನು ತಿಳಿದು ನಮಗೆ ಅತ್ಯಂತ ಸಂತಾಪವಾಗಿದೆ. ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಎಲ್ಲರ ಗೌರವ ಅಭಿಮಾನಗಳಿಗೆ ಪಾತ್ರರಾಗಿದ್ದಾರೆ. ನ್ಯಾಯ, ಧರ್ಮಗಳಿಗೆ ಅನ್ಯಾಯವಾದರೆ ವಿರೋಧವಾದ ಘಟನೆಗಳಾದರೆ ನಿರ್ದಾಕ್ಷಿಣ್ಯವಾಗಿ ಅದನ್ನು ಪ್ರತಿಭಟಿಸುವ ಹೋರಾಟಗಾರರೂ ಆಗಿದ್ದರು. ನನಗಂತೂ ಉತ್ತಮ ಸಲಹೆಗಾರರೂ ಆಗಿದ್ದರು. ಅವರ ಆತ್ಮಕ್ಕೆ ಭಗವಂತನ ಅನುಗ್ರಹ ನಿರಂತರವಾಗಿ ಇರಲೆಂದು ನಾನು ಪ್ರಾರ್ಥಿಸುತ್ತೇನೆ. ಅದರಂತೆ ನಮ್ಮ […]

ಸಮಾಜ-ಭಗವಂತನ ಸೇವೆಯಿಂದ ಮನುಷ್ಯನ ಬದುಕಿಗೆ ಸಾರ್ಥಕತೆ: ಪೇಜಾವರ ಶ್ರೀ

ಉಡುಪಿ: ಸಮಾಜದಿಂದ ಪಡೆದ ಸಂಪತ್ತಿನ ಸ್ವಲ್ಪ ಭಾಗವನ್ನು ನಾವು ಭಗವಂತ ಹಾಗೂ ಸಮಾಜಕ್ಕೆ ವಿನಿಯೋಗಿಸಬೇಕು. ಆಗ ಮನುಷ್ಯನ ಬದುಕಿಗೆ ಸಾರ್ಥಕತೆ ತುಂಬುತ್ತದೆ. ದೇವರ ಅನುಗ್ರಹ ಮತ್ತು ಸಮಾಜದ ಸಹಕಾರವಿಲ್ಲದೆ, ಯಾವ ವ್ಯಕ್ತಿಯೂ ಜೀವನದಲ್ಲಿ ಉತ್ತುಂಗ ಶಿಖರಕ್ಕೆ ಏರಲು ಸಾಧ್ಯವಿಲ್ಲ ಎಂದು ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದರು. ಅಂಬಲಪಾಡಿ ಶ್ಯಾಮಿಲಿ ಸಭಾಭವನದಲ್ಲಿ ಭಾನುವಾರ ನಡೆದ ಉದ್ಯಮಿ ಭುವನೇಂದ್ರ ಕಿದಿಯೂರು ಅವರ ೭೫ರ ಸಂಭ್ರಮ ಮತ್ತು ರತ್ನೋತ್ಸವ- ಅಭಿನಂದನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೇವರನ್ನು ನಿತ್ಯ ಪೂಜಿಸುವವರಿಗೆ ಯಾವುದೇ […]

ಗೋಹತ್ಯೆ ನಿಷೇಧ ಜಾರಿಗೆ ಪೇಜಾವರ ಶ್ರೀಗಳ ಆಗ್ರಹ

ಮಂಗಳೂರು: ಶುಕ್ರವಾರ ಮಂಡನೆಯಾಗಲಿರುವ ಕೇಂದ್ರ ಬಜೆಟ್ ನಲ್ಲಿ ಗೋಹತ್ಯೆ ನಿಷೇಧ ಜಾರಿ ಮಾಡಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಆಗ್ರಹಿಸಿದ್ದಾರೆ. ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ ವೇಳೆ ಮಾತನಾಡಿದ ಅವರು, ದೇಶದಲ್ಲಿ‌ ಗೋಹತ್ಯೆ ನಿಷೇಧ ಅಗತ್ಯ ವಾಗಿದೆ ಎಂದರು. ಜತೆಗೆ ದೇಶದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗೆ ಮೋದಿಯವರು ಕಾರ್ಯಕ್ರಮ ತರಬೇಕು. ಹಾಗೆಯೇ ಕೃಷಿ ಮತ್ತು ವೈದ್ಯಕೀಯಕ್ಕೆ ಬಜೆಟ್ ನಲ್ಲಿ ಹೆಚ್ಚು ಒತ್ತು ನೀಡಬೇಕೆಂದು ಶ್ರೀಗಳಿ ಮನವಿ ಮಾಡಿದರು.

ಗೋಹತ್ಯೆ ನಿಷೇಧಿಸಲು ಮೋದಿ ಸರಕಾರ ಸೂಕ್ತ ಕಾನೂನು ರೂಪಿಸಬೇಕು: ಪೇಜಾವರ ಶ್ರೀ

ಉಡುಪಿ: ಗೋಹತ್ಯೆ, ಗೋಮಾಂಸದ ಭಕ್ಷಣೆ ಹೇಯ ಕೃತ್ಯ. ಮಾನವೀಯ ನೆಲೆಯಲ್ಲಿ ಗೋವಿನ‌ ರಕ್ಷಣೆಯಾಗಬೇಕು. ಕೇಂದ್ರದಲ್ಲಿ ಬಿಜೆಪಿ ಬಹುಮತದಿಂದ ಆಯ್ಕೆಯಾಗಿದೆ. ಹೀಗಾಗಿ ನರೇಂದ್ರ ಮೋದಿ ನೇತೃತ್ವದ ಸರಕಾರ ಗೋವಿನ ‌ರಕ್ಷಣೆಗೆ ಸೂಕ್ತ ಕಾನೂನು ರೂಪಿಸಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರು ಹೇಳಿದ್ದಾರೆ. ಉಡುಪಿ ಶ್ರೀಕೃಷ್ಣ ಮಠದಲ್ಲಿ ಭಾನುವಾರ ದೇಸಿ ಗೋ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ದೇಶದಲ್ಲಿ‌ ಪಶು ಸಂಪತ್ತು ಬೆಳೆಯಬೇಕು. ಅಮೃತ ಕೊಡುವ ಗೋವುಗಳ ಬಗ್ಗೆ ಕಾಳಜಿ ವಹಿಸಬೇಕಿದೆ. ಗೋವುಗಳನ್ನು ಉಳಿಸುವ ಕಾಳಜಿ ಯಾರು […]

ಏ. 27ಕ್ಕೆ ಪೇಜಾವರ ಶ್ರೀಗಳ ಕುರಿತ ‘ಎ ಡೇ ವಿತ್ ದ ಸೈಂಟ್ ದೆನ್ ಆ್ಯಂಡ್ ನೌ’ ಚಿತ್ರಸಂಪುಟ ಲೋಕಾರ್ಪಣೆ 

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ನಾಲ್ಕನೇ ಮತ್ತು ಐದನೇ ಪರ್ಯಾಯದ ಒಂದು ದಿನದ ಚಟುವಟಿಕೆಗಳ ಕುರಿತಾಗಿ ಉದಯವಾಣಿ ಪತ್ರಿಕೆಯ ಹಿರಿಯ ಛಾಯಾಚಿತ್ರ ಪತ್ರಕರ್ತ ಆಸ್ಟ್ರೋ ಮೋಹನ್ ಅವರು ವಿಶೇಷವಾಗಿ ನಿರ್ಮಿಸಿದ ವಿಶೇಷ ಚಿತ್ರಗಳ ಆಧಾರಿತ ಚಿತ್ರಸಂಪುಟ `ಎ ಡೇ ವಿತ್ ದ ಸೈಂಟ್ ದೆನ್ ಆ್ಯಂಡ್ ನೌ’ ಅಪರೂಪದ ಕಾಫಿ ಟೇಬಲ್ ಬುಕ್ ಸಿದ್ಧಗೊಂಡಿದ್ದು ಅದು ಏ. 27ರಂದು ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಅನಾವರಣಗೊಳ್ಳಲಿದೆ ಎಂದು ಭೂತರಾಜ ಪ್ರಕಾಶನ ಪ್ರಕಾಶಕರಾದ ಪ್ರವೀಣಾ ಮೋಹನ್ ತಿಳಿಸಿದ್ದಾರೆ. ಚಿತ್ರ […]