ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರಿ ವಸಂತಿದೇವಿ ವಿಧಿವಶ

ಉಡುಪಿ: ಪೇಜಾವರ ವಿಶ್ವೇಶತೀರ್ಥ ಶ್ರೀಪಾದರ ಪೂರ್ವಾಶ್ರಮದ ಸಹೋದರಿ ಉಡುಪಿ ಕನ್ನರ್ಪಾಡಿ ನಿವಾಸಿ ವಸಂತಿದೇವಿ ಅಮ್ಮ (85) ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನ ಹೊಂದಿದರು. ಧರ್ಮಾನುಷ್ಠಾನ ನಿಷ್ಠೆಯ ಸಾತ್ವಿಕ ಗೃಹಿಣಿಯಾಗಿದ್ದ ಅವರು, ಸಹೋದರ ಹಾಗೂ ಮೂವರು ಪುತ್ರರನ್ನು ಅಗಲಿದ್ದಾರೆ.