ಪೇಜಾವರ ಶ್ರೀಗಳ ಆರೋಗ್ಯದಲ್ಲಿ ಕಾಣದ ಚೇತರಿಕೆ: ತನ್ನ ಅಂತಿಮ ಆಸೆಯಂತೆ ಆಸ್ಪತ್ರೆಯಿಂದ ಮಠಕ್ಕೆ ಸ್ಥಳಾಂತರ

ಉಡುಪಿ: ಶ್ವಾಸಕೋಶ ಉಸಿರಾಟ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ರಥಬೀದಿ ಪೇಜಾವರ ಮಠಕ್ಕೆ  ಭಾನುವರ ಬೆಳಗ್ಗೆ ‌6:55ಕ್ಕೆ ಸ್ಥಳಾಂತರಿಸಲಾಯಿತು. ತಜ್ಞ ವೈದ್ಯಕೀಯ ತಂಡ ಬಿಗು ಪೊಲೀಸ್ ಭದ್ರತೆಯಲ್ಲಿ ಕೃತಕ ಉಸಿರಾಟ ವ್ಯವಸ್ಥೆಯಲ್ಲೇ ಮಣಿಪಾಲದ ವಿಶೇಷ ಆಂಬುಲೆನ್ಸ್​ನಲ್ಲಿ ಮಠಕ್ಕೆ ಕರೆದೊಯ್ಯಲಾಯಿತು. ಶ್ರೀಗಳ ಅಂತಿಮ‌ ಆಸೆಯಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಸ್ಥಳಾಂತರ ವೇಳೆ ಸುಮಾರು 700 ಕ್ಕೂ‌ಅಧಿಕ ಮಂದಿ ಪೊಲಿಸ್ ಅಧಿಕಾರಿ ಮತ್ತು ಸಿಬ್ಬಂದಿ ಭದ್ರತೆಗೆ ನಿಯೋಜನೆ ಮಾಡಲಾಗಿತ್ತು. ಪೇಜಾವರ ಪೂರ್ವಾಶ್ರಮದ ಸಹೋದರ […]