ಧಾರ್ಮಿಕ ತಳಹದಿ ಭದ್ರಗೊಂಡರೆ ಜಗತ್ತಿಗೆ ಶಾಂತಿ: ಉದ್ಯಾವರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಧಾರ್ಮಿಕ ಸಭೆಯಲ್ಲಿ ವಿಶ್ವವಲ್ಲಭ ಶ್ರೀಗಳ ಆಶಯ

ಉಡುಪಿ: ಉದ್ಯಾವರ ಮಹತೋಭಾರ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಮೇ.22 ರಂದು ಬ್ರಹ್ಮಕುಂಭಾಭಿಷೇಕ ರಾಶಿ ಪೂಜೆ ಮಹೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಸೋದೆ ವಾದಿರಾಜ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಶ್ರೀಪಾದರು ಅನುಗ್ರಹ ಸಂದೇಶವನ್ನು ನೀಡಿದರು. ದೇವಾಲಯಗಳ ಸಾನ್ನಿಧ್ಯ ಶಕ್ತಿಯ ಚೈತನ್ಯ ವೃದ್ಧಿಯಿಂದ ಧಾರ್ಮಿಕ ತಳಹದಿ ಭದ್ರಗೊಂಡಲ್ಲಿ ದೇಶ ಮತ್ತು ಜಗತ್ತು ಶಾಂತಿ ಸುಭೀಕ್ಷೆಯಿಂದ ನೆಲೆಸಲು ಸಾಧ್ಯ ಎಂದು ಅವರು ಹೇಳಿದರು. ಉದ್ಯಾವರ ಗ್ರಾ.ಪಂ. ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಮಾತನಾಡಿ, ಶ್ರೀ ಕ್ಷೇತ್ರದ ಸಾನಿಧ್ಯ ಚೈತನ್ಯ ಬೆಳಗುವಲ್ಲಿ […]