ಪಟ್ಲ: ಆಮೆಗತಿಯಲ್ಲಿ ಸಾಗುತ್ತಿರುವ ಕಿರು ಸೇತುವೆ ನಿರ್ಮಾಣ ಕಾಮಗಾರಿ; ದಾರಿ ಇಲ್ಲದೆ ಗ್ರಾಮಸ್ಥರ ಪರದಾಟ.!

ಉಡುಪಿ: ಆತ್ರಾಡಿ – ಬಜ್ಪೆ ಹೆದ್ದಾರಿಯಲ್ಲಿ ಪಟ್ಲ ಬಯಲಿನಲ್ಲಿ ನಡೆಯುತ್ತಿರುವ ಒಂದು ಚಿಕ್ಕ ತೋಡಿಗೆ ಸೇತುವೆ ನಿರ್ಮಾಣದ ಕಾರ್ಯ ಆಮೆಗತಿಯಲ್ಲಿ ನಡೆಯುತ್ತಿರುವುದರಿಂದ ಹಠಾತ್ ಮಳೆಯಿಂದ ಬಯಲು ದಾಟಲು ನಡೆದು ಹೋಗಲು ದಾರಿ ಇಲ್ಲದಂತಾಗಿದೆ. ಈ ಸೇತುವೆಯ ಕಾಮಗಾರಿ ಕುರಿತು ಜಿಲ್ಲಾಧಿಕಾರಿಯವರು ವಾಹನಗಳನ್ನು ಬದಲಿ ದಾರಿಯಲ್ಲಿ ಚಲಿಸಿ ಸಹಕರಿಸುವಂತೆ ಸೂಚನೆಯನ್ನು ಪ್ರಕಟಿಸಿದ್ದರು.ಇಲ್ಲಿ ರಸ್ತೆ ಕಾಮಗಾರಿ ಸುಮಾರು ಹತ್ತನ್ನೆರಡು ತಿಂಗಳಿಂದ ಆಮೆಗತಿಯಲ್ಲಿ ಸಾಗುತ್ತಿತ್ತು. ಅದೂ ಪೂರ್ಣಗೊಂಡಿಲ್ಲ. ಸುಮಾರು ನೂರು ಮೀಟರ್ ರಸ್ತೆ ರಿಪೇರಿ ಮತ್ತು ಬಯಲು ಪ್ರದೇಶದಲ್ಲಿ ಇದ್ದ ರಸ್ತೆಗೆ […]