ಪರ್ಕಳ: ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ. ಶೇ.15% ಡಿವಿಡೆಂಡ್ ಘೋಷಣೆ.

ಉಡುಪಿ: ಸೊಸೈಟಿಯ 2023-24 ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆಪ್ಟೆಂಬರ್ 1ರಂದು ಮಣಿಪಾಲದ ಆರ್.ಎಸ್.ಬಿ ಸಭಾಭವನದಲ್ಲಿ ಸೊಸೈಟಿಯ ಅಧ್ಯಕ್ಷರಾದ ಅಶೋಕ್ ಕಾಮತ್ ಕೊಡಂಗೆರವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಸ್ಥೆಯ ಉಪಾಧ್ಯಕ್ಷರಾದ ಪಾಂಡುರಂಗ ಕಾಮತ್ ಸ್ವಾಗತಿಸಿದರು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತ್ಯಾನಂದ ನಾಯಕ್ ವಾರ್ಷಿಕ ವರದಿ ,ಲೆಕ್ಕಪತ್ರ, ಮುಂದಿನ ಸಾಲಿನ ಆಯವ್ಯಯ ಮಂಡಿಸಿದರು. ಸಂಘದ ಪಾಲುಬಂಡವಾಳ ರೂ.1.80 ಕೋಟಿ, ಠೇವಣಿ ರೂ.116.86 ಕೋಟಿ, ಸ್ವಂತ ನಿಧಿ ರೂ.11.68 ಕೋಟಿ , ಹೊರಬಾಕಿ ಸಾಲಗಳು ರೂ.82.45 ಕೋಟಿ ಹೊಂದಿ ರೂ.2.59 ಕೋಟಿ ನಿವ್ವಳ […]