ಪರ್ಕಳ: ರಾಷ್ಟ್ರೀಯ ಹೆದ್ದಾರಿ ಏರು ರಸ್ತೆ ಹತ್ತಲಾಗದೆ ಹಿಮ್ಮುಖ ಚಲಿಸಿ ಗ್ಯಾರೇಜ್ ಗೆ ನುಗ್ಗಿದ ಲಾರಿ; ಹಲವು ವಾಹನ ಜಖಂ

ಉಡುಪಿ: ಮಣಿಪಾಲ ಸಮೀಪದ ಕೆಳಪರ್ಕಳದಲ್ಲಿ ಗ್ರಾನೈಟ್ ತುಂಬಿದ ಲಾರಿಯೊಂದು ಹಿಮ್ಮುಖವಾಗಿ ಚಲಿಸಿ ಗ್ಯಾರೇಜ್‌ನಲ್ಲಿ ಇದ್ದ ಹಲವು ವಾಹನಗಳ ಮೇಲೆ ಬಿದ್ದಿದೆ. ಇದೇ ವೇಳೆ ಹಿಂಬದಿಯಲ್ಲಿದ್ದ ಸ್ಥಳೀಯರೊಬ್ಬರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆಳಪರ್ಕಳ ರಾಷ್ಟ್ರೀಯ ಹೆದ್ದಾರಿಯ ಬಳಿ ನಿಯಂತ್ರಣ ಕಳೆದುಕೊಂಡ ಗ್ರಾನೈಟ್ ತುಂಬಿದ ಲಾರಿ, ಗಣಪತಿ ನಾಯಕ್ ಎಂಬವರ ಗ್ಯಾರೇಜಿಗೆ ನುಗ್ಗಿದೆ. ಈ ವೇಳೆ ದುರಸ್ತಿಗೆ ಬಂದಿದ್ದ ನಾಲೈದು ವಾಹನಗಳು ಲಾರಿಯಡಿಗೆ ಬಿದ್ದಿವೆ. ಇದೇ ವೇಳೆ ಸ್ಥಳೀಯರಾದ ಸರ್ವೋತ್ತಮ ಅಮೀನ್ ಎಂಬವರರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಬೆಂಗಳೂರಿನಿಂದ ಪರ್ಕಳ […]