ಪರ್ಕಳ ಮಹಾಲಿಂಗೇಶ್ವರ ಮಹಾಣಗಣಪತಿ ದೇವಸ್ಥಾನ: ಮೇ11ರವರೆಗೆ ಬ್ರಹ್ಮಕಲಶೋತ್ಸವ ಸಂಭ್ರಮ, ಧಾರ್ಮಿಕ-ಸಾಂಸ್ಕೃತಿಕ ವೈಭವ.

ಉಡುಪಿ: ಪರ್ಕಳದಲ್ಲಿರುವ ಐತಿಹಾಸಿಕ ಪ್ರಸಿದ್ಧ ಶ್ರೀ ಮಹಾಲಿಂಗೇಶ್ವರ- ಮಹಾಗಣಪತಿ, ಮಹಿಷಮರ್ದಿನಿ ದೇವಸ್ಥಾನದಲ್ಲಿ ಏ.27ರಿಂದ ಮೇ 11ರವರೆಗೆ ಕ್ಷೇತ್ರಾಧಿಪತಿ ಮಹಾಲಿಂಗೇಶ್ವರ ದೇವರ ಪುನರ್ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ನಡೆಯಲಿದೆ. ಏ.27ರಂದು ಸಂಜೆ 4 ಗಂಟೆಗೆ ಪರ್ಕಳದ ವಿಶ್ವೇಶ್ವರ ಸಭಾಭವನದ ಬಳಿಯಿಂದ ಕ್ಷೇತ್ರಕ್ಕೆ ಹಸಿರು ಹೊರೆಕಾಣಿಕೆ ಮೆರವಣಿಗೆ ಬರಲಿದೆ. ಸಂಜೆ 6 ಗಂಟೆಗೆ ಮಣಿಪಾಲದ ಮಹೇಶ ಭಂಡಾರಿ ಮತ್ತು ಬಳಗದಿಂದ ಭಕ್ತಿ, ಜಾನಪದ ಗೀತಾ ವೈಭವ ನಡೆಯಲಿದೆ. ಏ.28, 29 ಮತ್ತು 30ರಂದು ಬೆಳಗ್ಗೆ 9ರಿಂದ ವಿವಿಧ ವೈದಿಕ ವಿಧಿ-ವಿಧಾನಗಳು ನಡೆಯಲಿದೆ. […]