ರಸ್ತೆಗಿಳಿಯುತ್ತಿವೆ 40 ನಾನ್ ಎಸಿ ಸ್ಲೀಪರ್, 100 ಸಾಮಾನ್ಯ ಬಸ್​ಗಳು: ಪ್ರಯಾಣಿಕರನ್ನು ‘ಪಲ್ಲಕ್ಕಿ’ಯಲ್ಲಿ ಹೊತ್ತು ತಿರುಗಲಿದೆ ಕೆಎಸ್​ಆರ್​ಟಿಸಿ

ಬೆಂಗಳೂರು: ಪ್ರಯಾಣಿಕರನ್ನು ಅಂಬಾರಿಯಲ್ಲಿ ಹೊತ್ತು ರಾಜ್ಯದ ರಸ್ತೆಗಳಲ್ಲಿ ಸಂಚರಿಸಿದ್ದ ಕೆಎಸ್​ಆರ್​ಟಿಸಿ ಇದೀಗ ಪಲ್ಲಕ್ಕಿ ಮೂಲಕ ಪ್ರಯಾಣಿಕರನ್ನು ಹೊತ್ತು ಸಂಚರಿಸಲು ಸಿದ್ಧವಾಗಿದೆ. ‘ಸಂತೋಷವು ಪ್ರಯಾಣಿಸುತ್ತಿದೆ’ ಎನ್ನುವ ಟ್ಯಾಗ್ ಲೈನ್​ನೊಂದಿಗೆ ಸಾರಿಗೆ ನಿಗಮದ ಪಲ್ಲಕ್ಕಿ ರಸ್ತೆಗಿಳಿಯಲು ಸಜ್ಜಾಗಿದೆ. ‘ಪಲ್ಲಕ್ಕಿ’ಯ ‘ಸಂತೋಷವು ಪ್ರಯಾಣಿಸುತ್ತಿದೆ’ ಕೆಎಸ್​ಆರ್​ಟಿಸಿಯು ಪಲ್ಲಕ್ಕಿ ಎಂಬ ಹೊಸ ಬಸ್​​ ಅನ್ನು ಕರ್ನಾಟಕದ ಜನತೆಗಾಗಿ ಬಿಡುಗಡೆ ಮಾಡುತ್ತಿದೆ. ಇದೇ ಅಕ್ಟೋಬರ್​ 7 ರಂದು ಸಿಎಂ ಸಿದ್ದರಾಮಯ್ಯ ಅಧಿಕೃತ ಚಾಲನೆ ನೀಡಲಿದ್ದಾರೆ. ನೂತನ ನಾನ್ ಎಸಿ ಸ್ಲೀಪರ್ ಬಸ್​ಗಳಿಗೆ ‘ಪಲ್ಲಕ್ಕಿ’ ಎನ್ನುವ ಹೆಸರನ್ನು […]