ಪಲಿಮಾರು: ಶಿಥಿಲಗೊಂಡ ಕಾಲು ಸಂಕದಲ್ಲೇ ದಿನನಿತ್ಯ ಓಡಾಡುವ ವೃದ್ಧ ದಂಪತಿ

ಉಡುಪಿ: ಪಲಿಮಾರು ಗ್ರಾಮ ಪಂಚಾಯತಿ ವ್ಯಾಪ್ತಿಯ ಅವರಾಲು ಮಟ್ಟು ಗ್ರಾಮದ ವೃದ್ಧ ದಂಪತಿಗಳು ತಮ್ಮ ಮನೆಗೆ ತಲುಪಲು ಏಕೈಕ ದಾರಿಯಾಗಿರುವ ಶಿಥಿಲಗೊಂಡ ಕಾಲು ಸಂಕವನ್ನೇ ಅವಲಂಬಿಸಿದ್ದಾರೆ. ಇವರ ಈ ದುಸ್ಥಿತಿಯನ್ನು ವೀಕ್ಷಿಸಿ ತಹಶಿಲ್ದಾರ್ ಪ್ರತಿಭಾ ಹೊಸ ಸುರಕ್ಷಿತ ಸೇತುವೆ ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ. ಪ್ರತಿದಿನ ಈ ವೃದ್ದ ದಂಪತಿಗಳು ತಮ್ಮ ದಿನನಿತ್ಯದ ಕೆಲಸಗಳಿಗೆ ಹೊರಗೆ ಬರಬೇಕೆಂದರೆ ಈ ಶಿಥಿಲ ಕಾಲು ಸಂಕದ ಮೇಲೆಯೇ ಬರಬೇಕು.ಅಲ್ಲಾಡುತ್ತಾ ಇನ್ನೇನು ಮುರಿದು ಬೀಳುತ್ತದೆಯೇನೋ ಎನ್ನುವಂತಿರುವ ಈ ಮರದ ಸಣ್ಣ ಹಲಗೆಯ ಮೇಲೆಯೇ […]