ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಂಧನ: ಭುಗಿಲೆದ್ದ ಹಿಂಸಾಚಾರ; ಹಲವರಿಗೆ ಗಾಯ

ಕರಾಚಿ: ಮಂಗಳವಾರದಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಇಸ್ಲಾಮಾಬಾದ್‌ನಲ್ಲಿ ಬಂಧಿಸಲಾಗಿದ್ದು, ಇದರ ಹಿನ್ನೆಲೆಯಲ್ಲಿ ದೇಶಾದ್ಯಂತ ವ್ಯಾಪಕ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಲಾಯಿತು. ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಅವರು ಅಲ್-ಖಾದಿರ್ ಟ್ರಸ್ಟ್ ಪ್ರಕರಣದ ವಿಚಾರಣೆಗೆ ಹಾಜರಾದ ಸಂದರ್ಭ ಇಸ್ಲಾಮಾಬಾದ್ ಹೈಕೋರ್ಟ್ ಆವರಣದಿಂದ ಅವರನ್ನು ಬಂಧಿಸಲಾಯಿತು. ಮುಂದಿನ ಪ್ರಕ್ರಿಯೆಗಾಗಿ ಅವರನ್ನು ಇಂದು ಇಸ್ಲಾಮಾಬಾದ್‌ನ ಹೊಸ ಪೊಲೀಸ್ ಅತಿಥಿ ಗೃಹದಲ್ಲಿ ಹಾಜರುಪಡಿಸಲಾಗುತ್ತದೆ. ಪಾಕ್ ಮಾಜಿ ಪ್ರಧಾನಿಯನ್ನು ಫೆಡರಲ್ ಪ್ಯಾರಾಮಿಲಿಟರಿ ಕಾನೂನು ಜಾರಿ ಸಂಸ್ಥೆ ಪಾಕಿಸ್ತಾನ ರೇಂಜರ್ಸ್ […]

ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ನಿಧನ

ದುಬೈ: ಕಾರ್ಗಿಲ್ ಯುದ್ಧದ ರೂವಾರಿ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಭಾನುವಾರ ದುಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅವರಿಗೆ 79 ವರ್ಷವಯಸ್ಸಾಗಿತ್ತು. 1999 ರಲ್ಲಿ, ಜನರಲ್ ಮುಷರಫ್ ಆಗಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಅಧಿಕಾರದಿಂದ ಹೊರದಬ್ಬಿ ತಾನೇ ಪ್ರಧಾನಿ ಪಟ್ಟಕ್ಕೇರಿ ಸರ್ವಾಧಿಕಾರ ಮೆರೆದಿದ್ದರು. ಒಂಬತ್ತು ವರ್ಷಗಳ ನಂತರ, ಆಸಿಫ್ ಅಲಿ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸರ್ಕಾರ ಮತ್ತು ಪ್ರತಿಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಷರೀಫ್‌ನ […]

ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ಭಾರತೀಯ ಒಕ್ಕೂಟಕ್ಕೆ ಸೇರಲು ಸಿದ್ಧ: ಪಿಒಕೆ ಕಾರ್ಯಕರ್ತ ಅಮ್ಜದ್ ಅಯೂಬ್ ಮಿರ್ಜಾ

ಕರಾಚಿ: 1970 ರ ದಶಕದಲ್ಲಿ ಜುಲ್ಫಿಕರ್ ಅಲಿ ಭುಟ್ಟೊ ಪಾಕಿಸ್ತಾನಿಗಳು ಹುಲ್ಲು ತಿನ್ನುತ್ತಾರೆ, ಹಸಿವಿನಿಂದ ಇರುತ್ತಾರೆ ಆದರೆ ಪರಮಾಣು ಬಾಂಬ್ ಹೊಂದಿಯೇ ಹೊಂದುತ್ತಾರೆ ಎಂದಿದ್ದರು. ಅದರಂತೆ ಈಗ 2023 ರಲ್ಲಿ ಪಾಕಿಸ್ತಾನಿಗಳು ತಮ್ಮದೇ ಆದ ಪರಮಾಣು ಬಾಂಬ್ ಹೊಂದಿದ್ದಾರೆ ಆದರೆ ಅಲಿ ಭುಟ್ಟೋ ಹೇಳಿದಂತೆ ಹುಲ್ಲು ತಿನ್ನುತ್ತಿದ್ದಾರೆ, ಇಡೀ ಪ್ರಪಂಚವನ್ನು ಹಣಕ್ಕಾಗಿ ಬೇಡುತ್ತಿದ್ದಾರೆ, ಜೀವ ಉಳಿಸುವ ಔಷಧಿಗಳಿಗಾಗಿ ಭಾರತವನ್ನು ಅವಲಂಬಿಸಿದ್ದಾರೆ. ಪಾಕಿಸ್ತಾನವು ಭಯೋತ್ಪಾದನೆಯನ್ನು ಪೋಷಿಸುತ್ತ ಬಂದಿದ್ದು ಇದೀಗ ಅದರ ಬೆಲೆ ತೆರುತ್ತಿದೆ. ಪಾಕಿಸ್ತಾನವು ಕಂಗಾಲಾಗಿ ಹೋಗಿದೆ. ಅಲ್ಲಿನ […]

ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರ‍್ಯಾಲಿಯಲ್ಲಿ ಗುಂಡಿನ ದಾಳಿ: ಓರ್ವ ಮೃತ 9 ಮಂದಿ ಗಾಯಾಳು

ಕರಾಚಿ: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಜೀರಾಬಾದ್‌ನಲ್ಲಿ ನಡೆದ ರ‍್ಯಾಲಿಯಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ಶಂಕಿತನೊಬ್ಬ ಗುಂಡಿನ ದಾಳಿ ನಡೆಸಿದ್ದು, ಇಮ್ರಾನ್ ಖಾನ್ ಮತ್ತು ಅವರ ಕೆಲವು ಬೆಂಬಲಿಗರಿಗೆ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ನವೆಂಬರ್ 3ರಂದು ವಜೀರಾಬಾದ್ ನ ಝಫರ್ ಅಲಿ ಚೌಕ್ ನಲ್ಲಿ ‘ನೈಜ ಸ್ವಾತಂತ್ರ್ಯ’ ರ‍್ಯಾಲಿಯಲ್ಲಿ ಕಂಟೈನರ್ ಟ್ರಕ್ ನಲ್ಲಿ ಭಾಷಣ ಮಾಡುತ್ತಿದ್ದ ಇಮ್ರಾನ್ ಮೇಲೆ ಬುಲೆಟ್ ಶಾಟ್‌ಗಳನ್ನು ಹಾರಿಸಲಾಗಿದ್ದು, ಈ ಸಮಯದಲ್ಲಿ ಅವರ ಕಾಲಿಗೆ ಬುಲೆಟ್ […]

ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತದ ರಾಷ್ಟ್ರಗಾನದ ಉದ್ಘೋಷ: ಭಾವುಕರಾದ ರೋಹಿತ್ ಶರ್ಮಾ

ಮೆಲ್ಬೋರ್ನ್: ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಭಾನುವಾರದಂದು ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಿ20 ವಿಶ್ವ ಕಪ್ ನಲ್ಲಿ ತನ್ನ ಸೂಪರ್ 12 ಪಂದ್ಯದಲ್ಲಿ ಬಾಬರ್ ಅಜಮ್ ನೇತೃತ್ವದ ಪಾಕಿಸ್ತಾನ ತಂಡವನ್ನು ಎದುರಿಸುತ್ತಿದೆ. ಪಂದ್ಯ ಆರಂಭಕ್ಕೂ ಮುನ್ನ ಭಾರತದ ರಾಷ್ಟ್ರಗಾನವನ್ನು ನುಡಿಸಲಾಗಿದ್ದು, ಇಡಿಯ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ ನಲ್ಲಿ ರಾಷ್ಟ್ರಭಕ್ತಿಯ ಉದ್ಘೋಷ ರಾಷ್ಟ್ರಗಾನದ ರೂಪದಲ್ಲಿ ಮೊಳಗಿದೆ. ನಾಯಕ ರೋಹಿತ್ ಶರ್ಮಾ ಅವರು ಕೊನೆಯ ಕ್ಷಣದಲ್ಲಿ ಭಾವುಕರಾಗಿದ್ದಾರೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಭಾರತೀಯ […]