ಪಡುಕೆರೆಯಲ್ಲಿ ಮರೀನಾ ಯೋಜನೆಗೆ ಅವಕಾಶ:ಉಡುಪಿ ಜಿಲ್ಲಾಧಿಕಾರಿ  

ಉಡುಪಿ  ಉಡುಪಿ ಜಿಲ್ಲೆಯ ಪಡುಕೆರೆ ಬೀಚ್ ಪ್ರದೇಶವು ಮರೀನಾಗೆ ಹೇಳಿ ಮಾಡಿಸಿದಂತಿದ್ದು, ಇಲ್ಲೇನಾದರೂ ಮರೀನಾ ನಿರ್ಮಾಣವಾದಲ್ಲಿ ದೇಶದಲ್ಲಿ ಪ್ರಪ್ರಥಮ ಮರೀನಾ ಹೊಂದಿರುವ ಹೆಗ್ಗಳಿಕೆ ಉಡುಪಿ ಜಿಲ್ಲೆಯದ್ದಾಗಲಿದೆ. ಪ್ರವಾಸೋದ್ಯಮಕ್ಕೂ, ದೇಶದ ಆರ್ಥಿಕತೆಗೂ ಶಕ್ತಿ ತುಂಬುವ ಈ ಯೋಜನೆಯ ಸಂಪೂರ್ಣ ನೀಲ ನಕ್ಷೆ ತಯಾರಿಸಿ, ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾಪ ಕಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದರು. ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮರೀನಾ ಯೋಜನೆ ಅನುಷ್ಠಾನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಕೊಚ್ಚಿನ್ ಮಾತ್ರ ಮರೀನಾ ಹೊಂದಿದ್ದು, ಅದೂ […]