ಪಡುಬಿದ್ರೆ: ಮನೆಗೆ ನುಗ್ಗಿ‌ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು

ಉಡುಪಿ: ಮನೆಯೊಂದಕ್ಕೆ ನುಗ್ಗಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವುಗೈದ ಘಟನೆ ಪಡುಬಿದ್ರೆ ಸಮೀಪದ ದೀನ್ ಸ್ಟ್ರೀಟ್‌ನಲ್ಲಿ ನಡೆದಿದೆ.ಮುಹಮ್ಮದ್ ಅಪ್ತಾಬ್ ಅಲಿ ಎಂಬವರ ತಾಯಿ ಮನೆಗೆ ಬೀಗ ಹಾಕಿ ಅಲ್ಲೇ ಹತ್ತಿರದಲ್ಲಿದ್ದ ಮಗಳ ಮನೆಗೆ ತೆರಳಿದ್ದರು. ಬುಧವಾರ ಮುಂಜಾನೆ ಮನೆಗೆ ಬಂದು ನೋಡಿದಾಗ ಈ ಕಳವು ಪ್ರಕರಣ ಬೆಳಕಿಗೆ ಬಂದಿದೆ. ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು, ಕಪಾಟನ್ನು ತುಂಡರಿಸಿ ಅದರಲ್ಲಿದ್ದ 7 ಪವನ್ ಚಿನ್ನದ ನೆಕ್ಲಿಸ್, 5 ಪವನ್ ತೂಕದ ಚಿನ್ನದ ನೆಕ್ಲಸ್, ಸುಮಾರು 3 […]