ಪಡುಬಿದ್ರಿ: ಚಿಕನ್ ಸ್ಟಾಲ್ ನಲ್ಲಿ ವಿದ್ಯುತ್ ಅವಘಡ; ಓರ್ವ ಸಾವು

ಉಡುಪಿ: ಚಿಕನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಓರ್ವ ಸಾವನ್ನಪ್ಪಿ ಇನ್ನೋರ್ವ ಗಾಯಗೊಂಡ ಘಟನೆ ಬುಧವಾರ  ಪಡುಬಿದ್ರಿಯ ಗಿರಿ ಚಿಕನ್ ಸ್ಟಾಲ್ ನಲ್ಲಿ ನಡೆದಿದೆ. ಮೃತರನ್ನು ಕಂಚಿನಡ್ಕ ನಿವಾಸಿ 45 ವರ್ಷದ ಬಶೀರ್ ಎಂದು ಗುರುತಿಸಲಾಗಿದೆ. ಇಂದು ಮಧ್ಯಾಹ್ನ 2.30 ರ ವೇಳೆಗೆ ಬಶೀರ್ ಅಂಗಡಿಯಲ್ಲಿ ಕೋಳಿ ಸ್ವಚ್ಛಗೊಳಿಸಲು ಕೋಳಿಯನ್ನು ಮೆಷಿನ್ ಒಳಗೆ ಹಾಕುವ ಸಂದರ್ಭದಲ್ಲಿ ವಿದ್ಯುತ್ ಅವಘಡ ಉಂಟಾಗಿದೆ. ಈ ವೇಳೆ ಕಾರ್ಮಿಕ ಬಶೀರ್ ಸಾವನ್ನಪ್ಪಿದ್ದಾನೆ. ಈ ವೇಳೆ ಗಾಯಗೊಂಡ […]