ಪಡೀಲ್ ದುರ್ಘಟನೆ: ಸರಕಾರದಿಂದ 10 ಲಕ್ಷ, ವೈಯಕ್ತಿಕವಾಗಿ 1 ಲಕ್ಷ ಪರಿಹಾರ ಚೆಕ್ ವಿತರಿಸಿದ ಶಾಸಕ ಕಾಮತ್

ಮಂಗಳೂರು: ಪಡೀಲ್ ಬಳಿಯ ಕೊಡಕ್ಕಲ್ ನ ಶಿವನಗರದಲ್ಲಿ ಭಾನುವಾರ ರಾತ್ರಿ ಪಕ್ಕದ ಮನೆಯ ಆವರಣ ಗೋಡೆ ಕುಸಿದು ಮೃತಪಟ್ಟ ರಾಮಣ್ಣ ಗೌಡ- ರಜನಿ ದಂಪತಿಯ ಪುತ್ರಿ ವರ್ಷಿಣಿ (9) ಹಾಗೂ ವೇದಾಂತ್ (7) ಕುಟುಂಬಕ್ಕೆ ಸೋಮವಾರ ಶಾಸಕ ಕಾಮತ್ ಅವರು ರಾಜ್ಯ ಸರಕಾರದ ವತಿಯಿಂದ ಹತ್ತು ಲಕ್ಷ ರೂ. ಪರಿಹಾರದ ಚೆಕ್ ಹಾಗೂ ತಮ್ಮ ವೈಯಕ್ತಿಕ ನೆಲೆಯಿಂದ ತಮ್ಮದೇ ಸೇವಾ ಸಂಸ್ಥೆಯಾದ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್  ಮೂಲಕ ಒಂದು ಲಕ್ಷ ರೂಪಾಯಿ ಚೆಕ್ ನೀಡಿದರು. ರಾಮಣ್ಣ ಗೌಡ-ರಜನಿ […]