ಪಚ್ಚನಾಡಿ ನಿರಾಶ್ರಿತರ ಪರಿಹಾರ‌ ಕೇಂದ್ರಕ್ಕೆ ಲೋಕಾಯುಕ್ತ ನ್ಯಾ.ಮೂ. ವಿಶ್ವನಾಥ ಶೆಟ್ಟಿ ಬೇಟಿ

ಮಂಗಳೂರು: ಮಂಗಳೂರಿನ ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ್ ಶೆಟ್ಟಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಹಾರ ಕೇಂದ್ರ ಎಲ್ಲಾ ಕಟ್ಟಡಗಳನ್ನು, ಅಡುಗೆ ಕೋಣೆ, ಶೌಚಾಲಯ, ಕೈತೋಟವನ್ನು ವೀಕ್ಷಿಸಿದರು. ಕೇಂದ್ರದ ನಿವಾಸಿಗಳೊಂದಿಗೆ ಸಮಾಲೋಚನೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು. ಅನಂತರ ಮಾತನಾಡಿದ ಅವರು, ನಗರದ ಪಚ್ಚನಾಡಿಯಲ್ಲಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ವಿಶಾಲವಾದ ಬೇರೆ ಜಮೀನು ಮಂಜೂರು ಮಾಡಲು ಮಂಗಳೂರು ತಹಶೀಲ್ದಾರ್‌ಗೆ ಈ ಸೂಚನೆ ನೀಡಿದರು. ಪ್ರಸಕ್ತ ನಿರಾಶ್ರಿತರ ಪರಿಹಾರ ಕೇಂದ್ರವು ಎರಡು ಎಕರೆ ಜಾಗದಲ್ಲಿದ್ದು, […]