ಮಾನವನ ದೇಹಕ್ಕೆ ಹಂದಿ ಲಿವರ್ ಅಳವಡಿಸಿ ಅದ್ಬುತವನ್ನೇ ಸೃಷ್ಟಿಸಿದ್ರು ಚೀನಾ ವೈದ್ಯರು.

ವುಹಾಂಗ್: ಚೀನಾದ ವೈದ್ಯರು ಹಲವು ಯಶಸ್ವಿ ಪ್ರಯೋಗ ಮಾಡುವಲ್ಲಿ ಸಂಶೋಧನೆ ಮಾಡುತ್ತಲೇ ಬಂದಿದ್ದಾರೆ. ಅಂತಹ ಇನ್ನೊಂದು ಐತಿಹಾಸಿಕ ಅದ್ಬುತವೊಂದನ್ನು ಈಗ ಮತ್ತೆ ಸಾಧಿಸಿದ್ದಾರೆ ಅದೆಂದರೆ ಮಾನವನ ದೇಹಕ್ಕೆ ಮೊದಲ ಬಾರಿಗೆ ಜೀನ್-ಸಂಪಾದಿತ ಹಂದಿಯ ಯಕೃತ್ತನ್ನು (Pig Liver) ಮಾನವ ದೇಹಕ್ಕೆ ಕಸಿ ಮಾಡಿ ಯಶಸ್ವಿಯಾದದ್ದು ಹೌದು. ಚೀನಾ ವೈದ್ಯರ ಈ ಪ್ರಯೋಜ ವೈದ್ಯಕೀಯ ಕ್ಷೇತ್ರದ ಅಚ್ಚರಿಗಳಲ್ಲೊಂದು ಎಂದು ಬಿಂಬಿಸಲಾಗುತ್ತಿದೆ. ಈ ಕಸಿ ಮೂಲಕ ಭವಿಷ್ಯದಲ್ಲಿ ಅಂಗಗಳ ದೊಡ್ಡ ಕೊರತೆಯನ್ನು ನೀಗಿಸಲು ಹಂದಿಯ ಅಂಗಗಳನ್ನು ಬಳಸಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ. […]