ಆಪರೇಷನ್ ಮಹಾದೇವ್; ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಉಗ್ರ ಸೇರಿ ಮೂವರನ್ನು ಹತ್ಯಗೈದ ಸೇನೆ

ಶ್ರೀನಗರ: ಕಾಶ್ಮೀರದ ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದ ಪಾಕ್ ಮೂಲದ ಮೂವರು ಭಯೋತ್ಪಾದಕರನ್ನು ಶ್ರೀನಗರ ಬಳಿಯ ಡಚಿಗಾಮ್ ಪಾರ್ಕ್ ಬಳಿಯ ಲಿಡ್ವಾಸ್ ಅರಣ್ಯ ಪ್ರದೇಶದಲ್ಲಿ ಭಾರತೀಯ ಭದ್ರತಾ ಪಡೆಗಳು ಹೊಡೆದುರುಳಿಸಿವೆ ಎಂದು ವರದಿಯಾಗಿದೆ. ಆಪರೇಷನ್ ಮಹಾದೇವ್:ಹರ್ವಾನ್ ಮುಲ್ನರ್ ಪ್ರದೇಶದಲ್ಲಿ ಉಗ್ರರು ತಂಗಿರುವ ಖಚಿತ ಮಾಹಿತಿ ಆಧರಿಸಿ ಸೋಮವಾರ (ಜು.28) ಬೆಳಗ್ಗೆ ಆಪರೇಷನ್ ಮಹಾದೇವ್ ಹೆಸರಿನಲ್ಲಿ ಸೇನೆ, ಸಿಆರ್ಪಿಎಫ್ ಹಾಗೂ ಜಮ್ಮು-ಕಾಶ್ಮೀರ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಪಹಲ್ಗಾಮ್ ದಾಳಿಯ ಮಾಸ್ಟರ್‌ಮೈಂಡ್ ಸುಲೇಮಾನ್ ಶಾ ಸೇರಿದಂತೆ 3 ಭಯೋತ್ಪಾದಕರು ಹತರಾಗಿದ್ದಾರೆ […]