ಡೈಮಂಡ್ ಲೀಗ್ ಪಂದ್ಯ: ಮೊದಲ ಸುತ್ತಿನಲ್ಲಿ 88.67 ಮೀ ಎಸೆತದೊಂದಿಗೆ ಗೆಲುವು ದಾಖಲಿಸಿದ ನೀರಜ್ ಚೋಪ್ರಾ

ಡೈಮಂಡ್ ಲೀಗ್ ಪಂದ್ಯದ ಮೊದಲ ಸುತ್ತಿನಲ್ಲಿ ಒಲಂಪಿಕ್ ಪದಕ ವಿಜೇತ ನೀರಜ್ ಚೋಪ್ರಾ ಮೊದಲ ಗೆಲುವು ದಾಖಲಿಸಿ ಭಾರತೀಯರು ಹೆಮ್ಮೆ ಪಡುವಂತೆ ಮಾಡಿದ್ದಾರೆ. ಕಳೆದ ವರ್ಷ 2022 ಡೈಮಂಡ್ ಲೀಗ್ ಫೈನಲ್ ಟ್ರೋಫಿಯನ್ನು ಗೆದ್ದಿದ್ದ ಚೋಪ್ರಾ, ಶುಕ್ರವಾರ ರಾತ್ರಿ ಕತಾರ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಘಟಾನುಘಟಿಗಳನ್ನು ಸೋಲಿಸಲು 88.67 ಮೀ ಅತ್ಯುತ್ತಮ ಎಸೆತದೊಂದಿಗೆ ಸೀಸನ್-ಆರಂಭದ ಮೊದಲ ಸುತ್ತನ್ನು ಗೆದ್ದಿದ್ದಾರೆ. ಇದು ತುಂಬಾ ಕಠಿಣ ಗೆಲುವು, ಆದರೆ ನನಗೆ ಸಂತೋಷವಾಗಿದೆ, ಇದು ನನಗೆ ಉತ್ತಮ ಆರಂಭವಾಗಿದೆ” ಎಂದು ಚೋಪ್ರಾ ಹೇಳಿದ್ದಾರೆ. […]