ನರೇಗಾ ಹಣ ಬಿಡುಗಡೆ ಬಾಕಿ ಇಲ್ಲ: ಸಚಿವೆ ಹೆಬ್ಬಾಳ್ಕರ್ ಗೆ ಸಂಸದ ಕೋಟ ತಿರುಗೇಟು

ಉಡುಪಿ: ಯುಪಿಎ ಸರಕಾರದ ಅವಧಿಯಲ್ಲಿದ್ದ 33 ಸಾವಿರ ಕೋಟಿ ರೂ. ನರೇಗಾ ಬಜೆಟ್ ಈಗ 86 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ. ಒಂದು ದಿನಕ್ಕೆ 150ರೂ. ಕನಿಷ್ಟ ಕೂಲಿಯನ್ನು 370ರೂ.ಗೆ ಏರಿಸಲಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ನರೇಗಾ ಹಣ ಬಿಡುಗಡೆ ಬಾಕಿ ಇಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಕೇಂದ್ರದಿಂದ ನರೇಗಾ ಹಣ ಬಂದಿಲ್ಲ ಎಂಬ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆರೋಪಕ್ಕೆ ಅವರು ಅವರು ಮಾಧ್ಯಮದ ಮೂಲಕ ಉತ್ತರಿಸಿದರು.ಉಡುಪಿಗೆ 7.90 ಸಾವಿರ ಮಾನವ ದಿನಗಳ […]