ಟ್ರೋಲ್ ಮೊಡೆಲ್‌ಗಳಾಗದೆ ರೋಲ್ ಮೊಡೆಲ್‌ಗಳಾಗಿ: ಕೇಮಾರು ಸ್ವಾಮೀಜಿ

ಬೆಳ್ಮಣ್: ಯುವ ಜನಾಂಗ ಟ್ರೋಲ್ ಮೊಡೆಲ್‌ಗಳಾಗದೆ ರೋಲ್ ಮೋಡೆಲ್‌ಗಳಾಗಬೇಕು. ಸಂಸ್ಕಾರಯುತ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಮಾದರಿಯಾಗಬೇಕೆಂದು ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹೇಳಿದರು. ಸಚ್ಚೇರಿಪೇಟೆಯ ಸಮರ್ಪಿತಾ ಬಳಗ ಗಾಂದಡ್ಪು ಇದರ ಆಶ್ರಯದಲ್ಲಿ ಜೆಸಿಐ ಮುಂಡ್ಕೂರು ಭಾರ್ಗವ ಹಾಗೂ ಸೇವಾ ಭಾರತಿ ಮುಂಡ್ಕೂರು ಇವರ ಸಹಯೋಗದಲ್ಲಿ ವೆನ್‌ಲಾಕ್ ಆಸ್ಪತ್ರೆಯ ರಕ್ತಪೂರಣ ಕೇಂದ್ರದ ನೇತೃತ್ವದಲ್ಲಿ ಸಚ್ಚೇರಿಪೇಟೆಯ ಪೊಸ್ರಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ಯುವಕರು […]