ನಿಟ್ಟೆ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಆವಿಷ್ಕರಿಸಿದ್ರು ಹೊಸ ಯಂತ್ರ!

ಕಾರ್ಕಳ: ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಆದಿತ್ಯ ಐತಾಳ್ ಕೆ., ಸಂದೀಪ್ ಕಾಮತ್ ಡಿ., ವರುಣ್ ಮತ್ತು ವಿಜೇತ್ ಕುಮಾರ್ ಅವರು ವಿಭಾಗದ ಸಹಪ್ರಾಧ್ಯಾಪಕ ಡಾ. ಅನಂತಕೃಷ್ಣ ಸೋಮಯಾಜಿಯವರ ಮಾರ್ಗದರ್ಶನದಲ್ಲಿ “ವರ್ಸಟೈಲ್ ರೂಟ್ ವೆಜಿಟೇಬಲ್ ಹಾರ್ವೆಸ್ಟರ್” ಎನ್ನುವ ಯಂತ್ರವನ್ನು ಆವಿಷ್ಕರಿಸಿದ್ದು, ಕೃಷಿ ಕ್ಷೇತ್ರದಲ್ಲಿ ಅದು ಬಹೂಪಯೋಗಿ ಯಂತ್ರವಾಗಿ ಪರಿಣಮಿಸಲಿದೆ. ಈ ಯಂತ್ರವು ಏಕಕಾಲದಲ್ಲಿ ಆಲೂಗಡ್ಡೆಯಂತಹ ಗಿಡಗಳನ್ನು ಕತ್ತರಿಸಿ ಗಡ್ಡೆಗಳನ್ನು ಅಗೆದು ಸಾರಣಿಸಿ ಸಂಗ್ರಹಿಸುವ ಯಂತ್ರವಾಗಿರುತ್ತದೆ. ಇದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ […]