ನಿಟ್ಟೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಫೆಮಿಲಿಯರೈಸೇಶನ್

ನಿಟ್ಟೆ: ಕರ್ನಾಟಕದ ಪ್ರತಿಷ್ಠಿತ ತಾಂತ್ರಿಕ ಮಹಾವಿದ್ಯಾಲಯಗಳಲ್ಲೊಂದಾದ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಜು.29 ರಂದು ಮೊದಲನೇ ವರ್ಷದ ಬಿ.ಇ ಕೋರ್ಸ್ ಸೇರಿರುವ ವಿದ್ಯಾರ್ಥಿಗಳಿಗೆ ಹಾಗೂ ಅವರ ಹೆತ್ತವರಿಗೆ “ನಿಟ್ಟೆ ಫೆಮಿಲಿಯರೈಸೇಶನ್” ಕಾರ್ಯಕ್ರಮ ನಡೆಯಿತು. ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಎನ್.ವಿನಯ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಂಪೆನಿಯ ಅಗತ್ಯತೆಗೆ ತಕ್ಕಂತೆ ವಿದ್ಯಾರ್ಥಿಗಳು ಕೌಶಲ್ಯತೆಯನ್ನು ಬೆಳೆಸಿಕೊಳ್ಳಬೇಕು. ಐಚ್ಛಿಕ ವಿಷಯಗಳಲ್ಲಿ ಸಮರ್ಥ ಬೆಳವಣಿಗೆ ತೋರುವುದು ಅಗತ್ಯ. ನಿಟ್ಟೆ ತಾಂತ್ರಿಕ ವಿದ್ಯಾಲಯವು ನಿಮ್ಮನ್ನು ಈ ದೃಷ್ಠಿಯಲ್ಲಿ ತಯಾರುಮಾಡಲು ಇಚ್ಘಿಸುತ್ತದೆ. ವಿದ್ಯೆ ಹಾಗೂ ಉದ್ಯೋಗದೊಂದಿಗೆ […]