ಈ ತಿಂಗಳಲ್ಲಿ ಸರ್ಕಾರಿ ನೌಕರರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್

ನವದೆಹಲಿ: ಕೇಂದ್ರ ಸರ್ಕಾರಿ ನೌಕರರ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕನಿಷ್ಠ ವೇತನವನ್ನು 18,000ರು ನಿಂದ 26,000 ರು ಗೇರಿಸುವಂತೆ ಬೇಡಿಕೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಇನ್ನೂ ಮನ್ನಣೆ ಸಿಕ್ಕಿಲ್ಲ. ಹೀಗಾಗಿ ಸರ್ಕಾರಿ ನೌಕರರು ತಮ್ಮ ಬೇಡಿಕೆ ಈಡೇರಲು ಇನ್ನಷ್ಟು ಕಾಲ ಕಾಯುವುದು ಅನಿವಾರ್ಯ ಎನ್ನಲಾಗಿತ್ತು. ಆದರೆ, ಸದ್ಯಕ್ಕೆ ತುಟ್ಟಿಭತ್ಯೆ ಹೆಚ್ಚಳದ ಬಗ್ಗೆ ತೀರ್ಮಾನವಾಗಿದ್ದು, ಜುಲೈ ತಿಂಗಳ ಅಂತ್ಯಕ್ಕೆ ಈ ಬಗ್ಗೆ ಅಧಿಕೃತ ಆದೇಶ ನಿರೀಕ್ಷಿಸಬಹುದಾಗಿದೆ. ತುಟ್ಟಿಭತ್ಯೆ ಪ್ರಮಾಣ ಕೂಡಾ ಶೇ.3ರ ಬದಲಿಗೆ ಶೇ 4ಕ್ಕಿಂತ ಅಧಿಕವಾಗುವ ನಿರೀಕ್ಷೆಯಿದೆ […]