12 ಲ.ರೂ. ಕೂಪನ್ಕಾರ್ಡ್ ವಿಜೇತರೆಂದು ನಂಬಿಸಿ; ಮಹಿಳೆಗೆ 3.55 ಲಕ್ಷ ರೂ. ವಂಚನೆ
ಉಡುಪಿ: ಕೂಪನ್ಕಾರ್ಡ್ ನಲ್ಲಿ 12 ಲಕ್ಷ ವಿಜೇತರಾಗಿದ್ದಾರೆಂದು ಮಹಿಳೆಯೊಬ್ಬರನ್ನು ನಂಬಿಸಿ 3.55 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬ್ರಹ್ಮಾವರ ಸಮೀಪದ ನೀಲಾವರ ಗ್ರಾಮದ ಕೆಮ್ಮಣ್ಣುಕಡು ನಿವಾಸಿ ಪಲ್ಲವಿ ವಂಚನೆಗೊಳಗಾದ ಮಹಿಳೆ. ಪಲ್ಲವಿ ಅವರಿಗೆ ಪೋಸ್ಟ್ ಮೂಲಕ ನಾಪ್ಟಾಲ್ ಎಂಬ ಸಂಸ್ಥೆ ಹೆಸರಿನಲ್ಲಿ 12 ಲಕ್ಷ ರೂ. ವಿಜೇತರಾಗಿದ್ದೀರಿ ಎನ್ನುವ ಕೂಪನ್ ಬಂದಿದೆ. ಹೀಗಾಗಿ ಅವರು ಅದರಲ್ಲಿದ್ದ ಮೊಬೈಲ್ಗೆ ಕರೆ ಮಾಡಿದ್ದು, ಕರೆ ಸ್ವೀಕರಿಸಿದ ಅಶ್ವಿನ್ ಕುಮಾರ್ ಮತ್ತು ಅಜಯ್ಕುಮಾರ್ ಎಂಬಿಬ್ಬರು 12 ಲಕ್ಷ ರೂ., […]