ಈ ಯುವಕನ ಕೈಯಲ್ಲಿ ಅರಳುವ ಚಿತ್ರ ನೋಡಿದ್ರೆ ಬೆರಗಾಗ್ತೀರಿ! ಕಲೆಯ ಗಣಿ, ಬೈಲೂರಿನ ನಿಖಿತ್ ಆಚಾರ್ಯ

ಕಲೆ ಎನ್ನುವುದು ಎಲ್ಲರಿಗೂ ಸಿದ್ಧಿಸುವುದಿಲ್ಲ.ಅದು ಆಸಕ್ತಿಯಿಂದ, ಸತತ ಪರಿಶ್ರಮದಿಂದ ನಮ್ಮಲ್ಲಿ ಹುಟ್ಟಿಕೊಂಡರೆ ಮಾತ್ರ ಅದನ್ನು ಲೋಕಕ್ಕೆ ತೆರೆದಿಡಲು ಸಾಧ್ಯ. ಚಿತ್ರಕಲೆಯೂ ಸಾಮಾನ್ಯವಾದುದಲ್ಲ. ಕಲ್ಪನೆಯಲ್ಲಿದ್ದದ್ದನ್ನು ಕಾಗದದಲ್ಲೋ, ಗೋಡೆಯಲ್ಲೋ ಬಣ್ಣದೊಂದಿಗೆ ಮೂಡಿಸುವ ಪ್ರತಿಭೆಗೆ ಅದರದ್ದೇ ಆದ ಘನತೆ ಇದೆ. ಇಲ್ಲೊಬ್ಬ ಗ್ರಾಮೀಣ ಭಾಗದ ಯುವಕನಿದ್ದಾನೆ. ಚಿತ್ರಕಲೆಯ ಎಲ್ಲಾ ಪ್ರಕಾರಗಳಲ್ಲೂ ಸೈ ಅನ್ನಿಸಿಕೊಂಡು ಕಲೆಯನ್ನು ತನ್ನ ಬದುಕಿನ ಭಾಗವಾಗಿಸಿಕೊಂಡ ಈ ಯುವಕ ತಾನು ಮಾಡುವ ಚೆಂದ ಚೆಂದದ ಚಿತ್ರಗಳಿಂದಲೇ ಗಮನ ಸೆಳೆಯುತ್ತಿದ್ದಾರೆ. ಚಿತ್ರಕಲೆಯ ಅಪ್ಪಟ ಪ್ರತಿಭೆಯೇ ಬೈಲೂರಿನ ನಿಖಿತ್ ಆಚಾರ್ಯ, ಕಾಂತರಗೋಳಿ. […]