ಆದಿತ್ಯ ಎಲ್-1 ಮಿಷನ್‌ನ ಹಿಂದಿದ್ದಾರೆ ನಿಗರ್ ಶಾಜಿ ಎಂಬ ಮಹಿಳೆ! ಕೃಷಿಕ ಪರಿವಾರದಿಂದ ಇಸ್ರೋವರೆಗಿನ ಅಮೋಘ ಪಯಣ!!

ಚೆನ್ನೈ: ಆದಿತ್ಯ ಎಲ್-1 ಮಿಷನ್‌ನ ಯಶಸ್ವಿ ಉಡಾವಣೆ ನಂತರ, ತಮಿಳುನಾಡಿನ ದಕ್ಷಿಣ ಜಿಲ್ಲೆಯ ತೆಂಕಾಶಿಯ ಪ್ರತಿಷ್ಠಿತ ಮಹಿಳಾ ವಿಜ್ಞಾನಿ ನಿಗರ್ ಶಾಜಿ ಹೆಸರು ಮುನ್ನೆಲೆಗೆ ಬಂದಿದೆ. ಸೂರ್ಯನನ್ನು ಅಧ್ಯಯನ ಮಾಡಲು ಭಾರತವು ಪ್ರಾರಂಭಿಸಿದ ಮೊದಲ ಬಾಹ್ಯಾಕಾಶ ಆಧಾರಿತ ಯೋಜನೆಯ ನಿರ್ದೇಶಕಿಯಾಗಿದ್ದಾರೆ ನಿಗರ್ ಶಾಜಿ. ತಮಿಳುನಾಡಿನ ಗ್ರಾಮಾಂತರ ಪ್ರದೇಶವಾದ ಸೆಂಗೊಟ್ಟೈ ಮೂಲದ ನಿಗರ್ ಶಾಜಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯದ ಹಳೆಯ ವಿದ್ಯಾರ್ಥಿ. 1987 ರಲ್ಲಿ ಇಸ್ರೋ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ಇವರು ಈಗ ಬೆಂಗಳೂರನ್ನು ತಮ್ಮ ಮನೆಯಾಗಿಸಿಕೊಂಡಿದ್ದಾರೆ. […]