ಹೊಸ ಇಂಟ್ರಾಡೇ ಎತ್ತರಕ್ಕೇರಿದ Nifty ಪ್ರಥಮ ಬಾರಿಗೆ 66,000 ಗಡಿ ದಾಟಿ ಮುಕ್ತಾಯವಾದ BSE Sensex

ಮುಂಬೈ :ಬಿಎಸ್‌ಇ ಸೆನ್ಸೆಕ್ಸ್ 502 ಪಾಯಿಂಟ್‌ಗಳ ಏರಿಕೆಯೊಂದಿಗೆ 66,060 ಕ್ಕೆ ಮುಕ್ತಾಯಗೊಂಡಾಗ ಬೃಹತ್ ಐಟಿ ಕಂಪನಿಗಳು ರ‍್ಯಾಲಿಯನ್ನು ಮುನ್ನಡೆಸಿದವು. ಐಟಿ ದಿಗ್ಗಜರ ಪೈಕಿ ಟಿಸಿಎಸ್ ಶೇ 5.1, ಟೆಕ್ ಮಹೀಂದ್ರಾ ಶೇ 4.4, ಇನ್ಫೋಸಿಸ್ ಶೇ 4.4ರಷ್ಟು ಏರಿಕೆ ಕಂಡಿವೆ. ಎಚ್‌ಸಿಎಲ್ ಟೆಕ್ ಶೇ 3.8ರಷ್ಟು ಮತ್ತು ವಿಪ್ರೋ ಶೇ 2.6 ರಷ್ಟು ಏರಿಕೆಯಾಗಿವೆ. ಐಟಿ ಷೇರು ಮೌಲ್ಯಗಳ ತೀವ್ರ ಏರಿಕೆಯಿಂದಾಗಿ ಶುಕ್ರವಾರ ಮೊದಲ ಬಾರಿಗೆ ಸೆನ್ಸೆಕ್ಸ್ 66,000 ಅಂಕಗಳ ಗಡಿ ದಾಟಿ ಮುಕ್ತಾಯವಾಗಿದೆ.ಬಿಎಸ್​ಇ ಸೆನ್ಸೆಕ್ಸ್​ ಮತ್ತು […]