ಹೆದ್ದಾರಿಯಲ್ಲಿ ಅಪಘಾತದಿಂದ ಸಾವು ಸಂಭವಿಸಿದರೆ ಅಧಿಕಾರಿಗಳ ಮೇಲೆ ಕೇಸ್ ದಾಖಲಿಸಿ: ಜಿಲ್ಲಾಧಿಕಾರಿ

ಉಡುಪಿ: ಹೆದ್ದಾರಿಯಲ್ಲಿ ಅವೈಜ್ಞಾನಿಕ ಕಾಮಗಾರಿಯ ಕಾರಣ ಅಪಘಾತಗಳು ಸಂಭವಿಸಿ, ಸಾವು ನೋವುಗಳಾದಲ್ಲಿ ಸಂಬಂಧಪಟ್ಟ ಹೆದ್ದಾರಿ ಅಧಿಕಾರಿಗಳ ಮೇಲೆ ಕೇಸು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಸೂಚನೆ ನೀಡಿದ್ದಾರೆ. ಅವರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ಹಾಲ್‌ನಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 66 ಮತ್ತು 169 ಮತ್ತು 169 ಎ ರಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗಿರುವ ಮೂಲಭೂತ ಸಮಸ್ಯೆಗಳನ್ನು 10 ದಿನಗಳ ಒಳಗೆ ಸಂಪೂರ್ಣವಾಗಿ ಬಗೆಹರಿಸಿ, ಈ […]
ಉಡುಪಿ ಕಲ್ಸಂಕ ಜಂಕ್ಷನ್ ವಾಹನ ದಟ್ಟಣೆ ತಪ್ಪಿಸಲು ಸರ್ಕಲ್ ನಿರ್ಮಾಣಕ್ಕೆ ಚಿಂತನೆ

ಉಡುಪಿ: ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169ಎ ಹಾದುಹೋಗುವ ಕಲ್ಸಂಕ ಜಂಕ್ಷನ್ ನಲ್ಲಿ ಅತಿಯಾದ ವಾಹನ ದಟ್ಟಣೆಯಿಂದ ಸಾರ್ವಜನಿಕವಾಗಿ ಸಮಸ್ಯೆಗಳು ಉಂಟಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಲ್ಸಂಕ ಜಂಕ್ಷನ್ ನಲ್ಲಿ ಸರ್ಕಲ್ ರಚಿಸುವ ಬಗ್ಗೆ ಶನಿವಾರದಂದು ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಗಳ ಜೊತೆ ಶಾಸಕ ರಘುಪತಿ ಭಟ್ ಸಭೆ ನಡೆಸಿ ಚರ್ಚಿಸಿದರು. ತೀರ್ಥಹಳ್ಳಿ – ಮಲ್ಪೆ ರಾಷ್ಟ್ರೀಯ ಹೆದ್ದಾರಿ – 169ಎ ಹಾದು ಹೋಗುವ ಪರ್ಕಳ ಪೇಟೆಯಿಂದ ಮಣಿಪಾಲ, ಉಡುಪಿ ನಗರದವರೆಗೆ ನಗರ ಪ್ರದೇಶವಾಗಿದ್ದು, […]
ಮೇ 16 ರಿಂದ ಆಗುಂಬೆ ಘಾಟಿಯಲ್ಲಿ ಲಘು ವಾಹನ ಸಂಚಾರ

ಉಡುಪಿ, ಮೇ 15: ರಾಷ್ಟ್ರೀಯ ಹೆದ್ದಾರಿ 169 ಎ ರ ಆಗುಂಬೆ ಘಾಟಿಯಲ್ಲಿ ಮೇ 16 ರಿಂದ ಲಘು ವಾಹನಗಳಾದ ಮಿನಿ ಬಸ್‍ಗಳು, ಜೀಪು, ವ್ಯಾನ್, ಕಾರುಗಳು ಮತ್ತು ದ್ವಿಚಕ್ರ ವಾಹನಗಳಿಗೆ ಮಾತ್ರ ಹಾಗೂ ಕ್ಯೂರಿಂಗ್ ಸಂಪೂರ್ಣವಾಗಿ ಮುಗಿದ ನಂತದ ಜೂನ್ 1 ರಿಂದ ಮಿನಿ ಬಸ್‍ಗಳು, ಜೀಪು, ವ್ಯಾನ್, ಕಾರುಗಳು ಹಾಗೂ ದ್ವಿಚಕ್ರ ವಾಹನಗಳೊಂದಿಗೆ ಎಲ್‍ಸಿವಿ ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ. ಅಲ್ಲಿಯವರೆಗೆ ಉಡುಪಿ-ಸಿದ್ದಾಪುರ-ಹೊಸಂಗಡಿ-ಮಾಸ್ತಿಕಟ್ಟೆ-ತೀರ್ಥಹಳ್ಳಿ (ರಾಜ್ಯ ಹೆದ್ದಾರಿ 52) […]