ಮರಳಿ ಸಂಪರ್ಕಕ್ಕೆ ಸಿಕ್ಕ ವಾಯೇಜರ್​ 2: ನಾಸಾ ವಿಜ್ಞಾನಿಗಳಲ್ಲಿ ಸಂತಸ

ನ್ಯೂಯಾರ್ಕ್​:ಕಳೆದೆರಡು ವಾರಗಳ ಹಿಂದೆ ವಾಯೇಜರ್​ ಸಂರ್ಪಕವನ್ನು ಕಳೆದುಕೊಂಡಿತು. 46 ವರ್ಷದ ಈ ಬಾಹ್ಯಕಾಶ ನೌಕೆಗೆ ನಿಯಂತ್ರಕರು ತಪ್ಪು ಸಂದೇಶವನ್ನು ಕಳುಹಿಸಿದ ಪರಿಣಾಮ ಇದರ ಅಂಟೆನಾ ಭೂಮಿಯಿಂದ ದೂರಕ್ಕೆ ತಿರುಗಿತು. ಇದೀಗ ಅದರ ಸಂಪರ್ಕ ಸಾಧಿಸಲಾಗಿದೆ ಎಂದು ನಾಸಾ ತಿಳಿಸಿದೆಈ ದೀರ್ಘ ಸಮಯದ ಬಳಿಕ ಶುಕ್ರವಾರ ಬಾಹ್ಯಕಾಶ ನೌಕೆ ಮತ್ತೆ ದತ್ತಾಂಶವನ್ನು ಕಳುಹಿಸಲು ಆರಂಭಿಸಿತು ಎಂದು ಕ್ಯಾಲಿಫೋರ್ನಿಯಾದ ಜೆಟ್​ ಪ್ರೊಪ್ಯುಲ್ಸನ್​ ಲ್ಯಾಬೋರೇಟರಿ ತಿಳಿಸಿದೆ. ಈ ಕುರಿತು ಮಾತನಾಡಿರುವ ಪ್ರಾಜೆಕ್ಟ್​ ಮ್ಯಾನೇಜರ್​ ಸೂಸೆನ್​ ಡೊಡ್​​, ವಾಯೇಜರ್​ ಮರು ಸಂಪರ್ಕಕ್ಕೆ ಸಿಕ್ಕಿದೆ […]