3 ಶತಕೋಟಿ ವರ್ಷ ಹಳೆಯ ಪುರಾವೆ ಮಂಗಳಗ್ರಹದಲ್ಲಿ ಪತ್ತೆ : ಜೀವ ವಿಕಾಸಕ್ಕೆ ಪೂರಕವಾಗಿದ್ದ ಗ್ರಹ

ನ್ಯೂಯಾರ್ಕ್ : ಮಂಗಳ ಗ್ರಹದಲ್ಲಿ 3.8 ರಿಂದ 3.6 ಶತಕೋಟಿ ವರ್ಷಗಳ ಹಿಂದಿನ ಸೆಡಿಮೆಂಟರಿ ಪದರುಗಳಲ್ಲಿ ಲವಣಗಳ ನಿಕ್ಷೇಪಗಳಿಂದ ರಚಿತವಾದ ಷಟ್ಕೋನಾಕಾರದ ಮಾದರಿಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.ಮಂಗಳ ಗ್ರಹದ ಮೇಲೆ ಜೀವಿಗಳ ಉಗಮಕ್ಕೆ ಪೂರಕವಾದ ವಾತಾವರಣ ಇತ್ತು ಎಂಬ ಬಗ್ಗೆ ಹೊಸ ಪುರಾವೆಗಳನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ.ಕ್ಯೂರಿಯಾಸಿಟಿಯ ಮಾಸ್ಟ್​ ಕ್ಯಾಮ್ 1 ಮತ್ತು ಚೆಮ್​ ಕ್ಯಾಮ್​ 2 ಉಪಕರಣಗಳನ್ನು ಬಳಸಿಕೊಂಡು ವಿಜ್ಞಾನಿಗಳು 3.8 ರಿಂದ 3.6 ಬಿಲಿಯನ್ ವರ್ಷಗಳ ಹಿಂದಿನ ಲವಣಗಳ ನಿಕ್ಷೇಪವನ್ನು ಕಂಡುಹಿಡಿದಿದ್ದಾರೆ. ಋತುಮಾನಕ್ಕನುಗುಣವಾಗಿ ಒಣಗುವ […]