ಹಟ್ಟಿಗೆ ನುಗ್ಗಿ ಕರು ತಿಂದ ಚಿರತೆ..!

ಮಂಗಳೂರು: ಚಿರತೆಯೊಂದು ಹಟ್ಟಿಗೆ ದಾಳಿ ಮಾಡಿ ಕರುವನ್ನು ಕೊಂದು ಅರ್ಧ ತಿನ್ನುವ ಮೂಲಕ ಭಯದ ವಾತಾವರಣ ಸೃಷ್ಟಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಳ್ಪ ಗ್ರಾಮದಲ್ಲಿ ನಡೆದಿದೆ. ಕಲ್ಲೇರಿಯ ನಿವಾಸಿ ಸುಬ್ರಹ್ಮಣ್ಯ ಭಟ್ ಎಂಬವವರ ಹಟ್ಟಿಗೆ ರಾತ್ರಿ ವೇಳೆ ದಾಳಿ ಮಾಡಿದ ಚಿರತೆ ಕರುವನ್ನು ತಿಂದು ಹಾಕಿದೆ. ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ. ಮಂಗಳವಾರ ರಾತ್ರಿ ಬಳ್ಪದ ವ್ಯಕ್ತಿಯೊಬ್ಬರು ರಾತ್ರಿ ಮನೆಗೆ ತೆರಳುವಾಗ ಚಿರತೆಯನ್ನು ನೋಡಿದ್ದು, ಅದೇ ದಿನ ರಾತ್ರಿ ಕಲ್ಲೇರಿಯಲ್ಲಿ ಕರುವನ್ನು ಬಲಿಪಡೆದಿದೆ […]