ಉಡುಪಿ: ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆ: ಸಮಸ್ಯೆಗಳನ್ನು ನಿವಾರಿಸುವೆ, ಶಾಸಕರ ಭರವಸೆ

ಉಡುಪಿ: ತಾಲೂಕು ಪಂಚಾಯತ್ ನ ಸಾಮಾನ್ಯ ಸಭೆಯು ಜೂ. 14 ರಂದು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಜರಗಿತು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ಅಧ್ಯಕ್ಷರಾದ  ನಳಿನಿ ಪ್ರದೀಪ್ ರಾವ್ ವಹಿಸಿದ್ದರು.ನರೇಗಾ ಯೋಜನೆಯಡಿ ಬಾವಿ ನಿರ್ಮಾಣಕ್ಕೆ ಐವತ್ತು ಸೆಂಟ್ಸ್ ಗಿಂತ ಹೆಚ್ಚು ವಿಸ್ತೀರ್ಣದಜಾಗ ಅವಶ್ಯಕ ವಿದ್ದು 50 ಸೆಂಟ್ಸ್ ಕಡಿಮೆ ಜಾಗ ಇರುವವರಿಗೂ ಕೂಡ ನರೇಗಾ ಯೋಜನೆಯಡಿ ಬಾವಿ ನಿರ್ಮಿಸುವ ಬಗ್ಗೆ ಸಾರ್ವಜನಿಕರಿಂದ ಮನವಿಗಳು ಬರುತ್ತಿದ್ದು ಈ ಬಗ್ಗೆ ಜಿಲ್ಲಾ ಪಂಚಾಯತ್ ನ ಸಾಮಾನ್ಯ ಸಭೆಯಲ್ಲಿ ಪ್ರಸ್ಥಾಪಿಸುವುದಾಗಿ  ಶಾಸಕರು ತಿಳಿಸಿದರು. […]