ಡಬ್ಬಲ್ ಶರ್ಟ್ ಹಾಕಿಕೊಂಡು ಓಡಾಡುವ ಆಟೋ ಡ್ರೈವರ್ ಗಳಿಗೆ ಬೀಳಲಿದೆ ದಂಡದ ಬರೆ.!

ಉಡುಪಿ: ಆಟೋ ಚಾಲಕರು ಒಳಗೊಂದು ಶರ್ಟ್ ಹಾಕಿ, ಹೊರಗೆ ಖಾಕಿ ಶರ್ಟ್  ಓಪನ್ ಬಿಟ್ಟುಕೊಳ್ಳುವುದು ಒಂದು ಟ್ರೆಂಡ್ ಆಗಿತ್ತು. ಇದೀಗ ಉಡುಪಿಯಲ್ಲಿ ಆಟೋ ಚಾಲಕರಿಗೆ ಇದೇ ಟ್ರೆಂಡ್ ದಂಡ ಕಟ್ಟಲು ಆಹ್ವಾನ ನೀಡುತ್ತಿದೆ. ಸಿನಿಮಾ ಹಿರೋಗಳ ಸ್ಟೈಲ್ ನಲ್ಲಿ ರೋಡ್ ಗೆ ಇಳಿಯುತ್ತಿದ್ದ ಆಟೋ ಚಾಲಕರಿಗೆ ಉಡುಪಿಯಲ್ಲಿ ಇನ್ಮುಂದೆ ಪೊಲೀಸರಿಂದ ದಂಡದ ಬರೆ ಬೀಳುತ್ತೆ. ಉಡುಪಿಯ ಪ್ರಮುಖ ಜಂಕ್ಷನ್‍ಗಳಲ್ಲಿ ಪೊಲೀಸರು ಡಬ್ಬಲ್ ಶರ್ಟ್ ಹಾಕುವ ಆಟೋ ಡ್ರೈವರ್‌ಗಳಿಗೆ ಕಾನೂನಿನ ಪಾಠ ಮಾಡುತ್ತಿದ್ದಾರೆ. ಮೋಟಾರು ವಾಹನ ಕಾಯ್ದೆಯ ಪ್ರಕಾರ […]