ಅಧಿಕಾರ, ಅಂತಸ್ತಿಗಿಂತಲೂ ಮಾನವೀಯತೆ ಅತೀ ಮುಖ್ಯ ಎಂದು ತೋರಿಸಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ ಎರಡನೇ ಬಲಿಯಾಗಿದೆ. ಎಪ್ರಿಲ್ 19ರಂದು ಮೃತಪಟ್ಟ ಮಹಿಳೆಯ ಸಂಬಂಧಿ ಮಹಿಳೆಯೋರ್ವರು ನಿನ್ನೆ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಭಾನುವಾರ ಮೃತಪಟ್ಟ ಮಹಿಳೆಯ ಶವಸಂಸ್ಕಾರವನ್ನು ಮಂಗಳೂರಿನಲ್ಲಿ ನಡೆಸಿದಾಗ ಸ್ಥಳೀಯವಾಗಿ ಜನರು ಪ್ರತಿಭಟಿಸಿದ್ದರು. ಗುರುವಾರವು ಮೃತಪಟ್ಟ 75ರ ವೃದ್ದೆಯ ಶವ ಸಂಸ್ಕಾರವು ಜಿಲ್ಲಾಡಳಿತಕ್ಕೆ ಸವಾಲಾಗಿ ಪರಿಣಮಿಸಿತು. ಮಂಗಳೂರಿನ ಎರಡು ಮೂರು ಕಡೆಗಳಲ್ಲಿ ಇದಕ್ಕೆ ವಿರೋಧ ವ್ಯಕ್ತವಾದಾಗ ಆಡಳಿತ ಬಂಟ್ವಾಳದಲ್ಲಿ ಈ ಕಾರ್ಯಕ್ಕೆ ಮುಂದಾಯಿತು. ಇದಕ್ಕೆ ವಿರೋಧ ಉಂಟಾದಾಗ ರಾತ್ರಿ ಸುಮಾರು 11 ಗಂಟೆಯ […]